ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರತಿ ತಾಲೂಕಲ್ಲಿ ಡಯಾಲಿಸಿಸ್ ಕೇಂದ್ರ: ಸಚಿವ ಖಾದರ್

Mainashree
Updated On : 4 Aug 2013, 11:25 am

ಮಂಗಳೂರು: ರಾಜ್ಯದ ಪ್ರತಿ ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಸುಧಾರಿತ ಡಯಾಲಿಸಿಸ್ ಘಟಕ ಮತ್ತು ಮೊಬೈಲ್ ಕ್ರಿಟಿಕಲ್ ಕೇರ್ ಯುನಿಟ್‌ಗೆ ಚಾಲನೆ ನೀಡಿ ಶನಿವಾರ ನಗರದ ಐಎಂಎ ಸಭಾಂಗಣದಲ್ಲಿ ಮಾತನಾಡಿದರು. ಪ್ರಾಥಮಿಕ ಹಂತದಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ತಾಲೂಕಿಗೆ ಡಯಾಲಿಸ್ ಕೇಂದ್ರ ನೀಡಲಾಗುವುದು. ನಂತರ ಎಲ್ಲ ತಾಲೂಕುಗಳಿಗೆ ವಿಸ್ತರಿಸಲಾಗುವುದು ಎಂದರು. ಎಂಬಿಬಿಎಸ್ ಕಲಿತ ವಿದ್ಯಾರ್ಥಿಗಳು ಒಂದು ವರ್ಷ ಹಳ್ಳಿಯಲ್ಲಿ ಕರ್ತವ್ಯ ನಿರ್ವಹಿಸುವುದು ಕಡ್ಡಾಯ. ಈ ಬಗ್ಗೆ ವೈದ್ಯರುಗಳು ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸಬೇಕು. ಒಬ್ಬ ಎಂಬಿಬಿಎಸ್ ವಿದ್ಯಾರ್ಥಿಗೆ ಸರ್ಕಾರ ಲಕ್ಷಾಂತರ ವೆಚ್ಚಮಾಡುತ್ತಿದೆ. ಇದು ಜನರ ತೆರಿಗೆ ಹಣವಾಗಿದ್ದು, ವಿದ್ಯಾರ್ಥಿಗಳು ಜನಸೇವೆಗೆ ಮುಂದಾಗಬೇಕಾದ ಅಗತ್ಯವನ್ನು ಹೇಳಿದರು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಿ.ಪಿ. ಶುಗರ್ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ ಎಂದರು. ಯುನಿಟಿ ಹೆಲ್ತ್ ಕೇರ್ ಮತ್ತು ಹೆಲ್ತ್ ಸರ್ವೀಸ್ ಲಿಮಿಟೆಡ್ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಅಜ್ಮಲ್ ಹಬೀಬ್, ಕಾರ್ಯನಿರ್ವಾಹಕ ನಿರ್ದೇಶಕ ಅಶ್ಫೀಕ್ ಹಬೀಬ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement