ಮುಗುಚಿದ ಬೋಟ್: 8 ಮೀನುಗಾರರ ರಕ್ಷಣೆ
ಮಂಗಳೂರು: ಅಳಿವೆಬಾಗಿಲು ಬಳಿ ಮೀನುಗಾರಿಕೆ ಬೋಟ್ ಮಗುಚಿದ್ದು, 8 ಮಂದಿಯನ್ನು ಇನ್ನೊಂದು ಬೋಟ್ನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. ಸೋಮವಾರ ನಿಮ್ಮಿ ಕಲ್ಯಾಣಿ ಎಂಬ ಬೋಟ್ನಲ್ಲಿ 8 ಮೀನುಗಾರರು ಆಳಸಮುದ್ರ ಮೀನುಗಾರಿಕೆಗೆ ಹಳೆಬಂದರು ಅಳಿವೆ ಬಾಗಿಲು ಮೂಲಕ ತೆರಳುತ್ತಿದ್ದರು. ಈ ವೇಳೆಗೆ ಅಳಿವೆ ಬಾಗಿಲ ಬಳಿ ಹೂಳು ತುಂಬಿದ್ದರಿಂದ ಬೋಟ್ ಪಲ್ಟಿಯಾಯಿತು. ಸಮೀಪದಲ್ಲಿ ಸಾಗುತ್ತಿದ್ದ 'ಸಾಗರ ಕುಸುಮ' ಬೋಟ್ ಮೀನುಗಾರರು ಆಗಮಿಸಿ ಕಡಲಿಗೆ ಬಿದ್ದ ಎಂಟು ಮೀನುಗಾರರನ್ನು ರಕ್ಷಿಸಿ ತಟಕ್ಕೆ ತಂದಿದ್ದಾರೆ.