ವಿಗ್ರಹ ಸ್ವೀಕರಿಸಿದ ಆರೋಪಿಗೆ 9 ದಿನ ಪೊಲೀಸ್ ಕಸ್ಟಡಿ
ಮಂಗಳೂರು: ಮೂಡುಬಿದರೆ ಜೈನವಿಗ್ರಹ ಕಳವು ಪ್ರಕರಣದಲ್ಲಿ ವಿಗ್ರಹ ಸ್ವೀಕರಿಸಿದ ಜ್ಯುವೆಲ್ಲರಿ ಮಾಲೀಕ ಛತ್ತೀಸ್ಗಡ್ ದುರ್ಗ ನಿವಾಸಿ ರಾಜಾಜಿ (47)ಯನ್ನು ಬಂಧಿಸಿದ ಪೊಲೀಸರು ಮಂಗಳೂರಿಗೆ ಕರೆತಂದಿದ್ದು, ಆತನಿಗೆ ಕೋರ್ಟ್ 9 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.
ಪೊಲೀಸ್ ಕಮಿಷನರ್ ಮನೀಶ್ ಕರ್ಬಿಕರ್ ನೇತೃತ್ವದ ತಂಡ ಛತ್ತೀಸ್ಗಢ, ಜಾರ್ಖಂಡ್ಗೆ ತೆರಳಿ ವಿಗ್ರಹ ಸ್ವೀಕರಿಸಿದ ಆರೋಪಿ ತಲಾಶೆ ನಡೆಸಿದರು. ಆರಂಭದಲ್ಲಿ ಆರೋಪಿ ಪೊಲೀಸ್ ಜತೆ ಬರಲು ನಿರಾಕರಿಸಿದ್ದು, ಬಳಿಕ ಛತ್ತೀಸ್ಗಡ ಪೊಲೀಸರ ನೆರವಿನಿಂದ ಬಂಧಿಸಿದ್ದಾರೆ.
ಆತನನ್ನು ಮೂಡುಬಿದರೆ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದರು. ಇನ್ನೊಬ್ಬ ಆರೋಪಿ ಅನಾರೋಗ್ಯ ಕಾರಣ ನೀಡಿ ಛತ್ತೀಸ್ಗಡ ಆಸ್ಪತ್ರೆಗೆ ದಾಖಲಾಗಿದ್ದು, ಡಿಸ್ಚಾರ್ಜ್ ಬಳಿಕ ಬಂಧಿಸುವ ಸಾಧ್ಯತೆ ಇದೆ.
ಪ್ರಮುಖ ಆರೋಪಿ ಸಂತೋಷ್ ಯಾನೆ ಘನಶ್ಯಾಮ್ ದಾಸ್ ಪೊಲೀಸರ ವಶದಲ್ಲಿದ್ದು, ವಿಗ್ರಹಗಳನ್ನು ರಾಜಾಜಿಗೆ ನೀಡಿರುವುದಾಗಿ ಹೇಳುತ್ತಿದ್ದಾನೆ. ಆದರೆ ರಾಜಾಜಿ ಮಾತ್ರ ತಾನು ವಿಗ್ರಹ ಸ್ವೀಕರಿಸಿಲ್ಲ ಎನ್ನುತ್ತಿದ್ದಾನೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿ ಸತ್ಯ ಹೊರ ಹಾಕುವ ಸಿದ್ಧತೆಯಲ್ಲಿದ್ದಾರೆ. ಸಂತೋಷ್ದಾಸ್ ಮಾವ ದಿಗಂಬ ಮೊಹಾಂತಿ ಮತ್ತು ಪತ್ನಿ ದೀಪ್ತಿಮಯಿ ಮೊಹಾಂತಿ ಈಗಾಗಲೇ ಜೈಲ್ನಲ್ಲಿದ್ದಾರೆ.