ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೆದರಿಸಿ ದನ ಒಯ್ದರೆ ಡಕಾಯಿತಿ ಕೇಸ್

Mainashree
Updated On : 7 Aug 2013, 11:35 am

ಮಂಗಳೂರು: ಕೊಟ್ಟಿಗೆಗೆ ನುಗ್ಗಿ ಕಳವು ಮಾಡುವರ ಮೇಲೆ ಡಕಾಯಿತಿ ಪ್ರಕರಣ ದಾಖಲಿಸಲು ಸೂಚಿಸುತ್ತೇವೆ. ಇದೇ ವೇಳೆ ಸಂಘಟನೆಗಳು ಕಾನೂನು ಕೈಗೆತ್ತಿಕೊಂಡು ದನ ಸಾಗಣೆ ವಾಹನವನ್ನು ತಡೆದರೆ ಅವರ ವಿರುದ್ಧ ದರೋಡೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಎಂ.ಎನ್. ರೆಡ್ಡಿ ಎಚ್ಚರಿಸಿದರು.  ಬುಧವಾರ ಮಂಗಳೂರಿನಲ್ಲಿ ಮಾತನಾಡಿ, ದನಗಳ್ಳತನ ಇನ್ಯಾವುದೇ ಕಳ್ಳತನ ಬಗ್ಗೆ ಜನಸಾಮಾನ್ಯರು ಆತಂಕ ಪಡುವ ಅಗತ್ಯವಿಲ್ಲ. ಗೋಕಳವು ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿ ಜನಪ್ರತಿನಿಧಿ, ಸಚಿವರಿಂದ ಯಾವುದೇ ಒತ್ತಡವಿಲ್ಲ. ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.  'ನಮಗೆ ಇದು ನೇರ ಸವಾಲು. ದನಗಳ್ಳರನ್ನು ನಿಯಂತ್ರಿಸುವ ಸಾಮರ್ಥ್ಯ ಪೊಲೀಸರಲ್ಲಿದೆ. ದನ ಕಳ್ಳರ ಬಗ್ಗೆ ನೀವು ಪೊಲೀಸರಿಗೆ ಮಾಹಿತಿ ನೀಡಬೇಕೇ ಹೊರತು, ಪೊಲೀಸರ ಕೆಲಸಕ್ಕೆ ಹೋಗಬೇಡಿ. ಕಾನೂನು ಕೈಗೆತ್ತಿಕೊಳ್ಳಬೇಡಿ. ಕೆಳಹಂತದ ಪೊಲೀಸರು ಸ್ಪಂದಿಸದಿದ್ದರೆ, ಮೇಲಧಿಕಾರಿಗಳಿಗೆ ದೂರು ನೀಡಿ' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement