ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದೋಚಲು ಬಂದವರಿಗೆ ಕತ್ತಿಯಿಂದ ಕಡಿದ ಕೃಷಿಕ!

Vishwanath S
Updated On : 9 Aug 2013, 11:41 am

ಮಂಗಳೂರು: ದೋಚಲು ಬಂದವರನ್ನು ಧೈರ್ಯವಾಗಿ ಎದುರಿಸಿದ ಕೃಷಿಕ, ಪಿಗ್ಮಿ ಸಂಗ್ರಾಹಕರೊಬ್ಬರು ಕತ್ತಿಯಿಂದ ಕಡಿದು ಇಬ್ಬರನ್ನು ಹಿಮ್ಮೆಟ್ಟಿಸಿದ್ದಾರೆ. ಸಂಗ್ರಹಿಸಿದ ಪಿಗ್ನಿ ಹಣದ ಮೇಲೆ ಕಣ್ಣಿಟ್ಟು ದೋಚಲು ಬಂದ ಇಬ್ಬರು ಕತ್ತಿ ಏಟು ರುಚಿ ತಿಂದು ಎದ್ದೆನೋ ಬಿದ್ದೆನೋ ಎಂದು ಕಾಲ್ಕಿತ್ತಿದ್ದಾರೆ.
 ಕೊಡೆಕ್ಕಲ್ ನಾರಾಯಣ ಭಟ್ (50) ಮಂಚಿ ಇರಾ ರಸ್ತೆಯಲ್ಲಿ ಜೀಪ್‌ನಲ್ಲಿ ಬುಧವಾರ ರಾತ್ರಿ 11 ಗಂಟೆಗೆ ಒಬ್ಬಂಟಿಯಾಗಿ ಮನೆಯತ್ತ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬರುತ್ತಿದ್ದ ಸ್ಕೂಟರ್‌ಗೆ ದಾರಿ ಬಿಟ್ಟರು. ಸ್ಕೂಟರ್ ಹಿಂಬದಿ ಕುಳಿತಿದ್ದ ವ್ಯಕ್ತಿ ಹಿಂದಿರುಗಿ, 'ಟಯರ್ ಪಂಕ್ಚರ್ ಆಗಿದೆ' ಎಂದು ಕೈ ಭಾಷೆಯಲ್ಲಿ ಭಟ್ಟರಿಗೆ ತೋರಿಸಿ, ಸ್ಕೂಟರ್ ನಿಲ್ಲಿಸಿದ ಇಬ್ಬರು ಇಳಿದು ಬಂದು ಟಯರ್ ಪಂಕ್ಚರ್ ಎಂದರು. ಭಟ್ಟರು ಕುಳಿತಲ್ಲಿಂದಲೇ ಬಗ್ಗಿ ನೋಡಿದಾಗ ಪಂಕ್ಚರ್ ಆಗಿರಲಿಲ್ಲ. ಆಗ ಇನ್ನೊಬ್ಬ ವ್ಯಕ್ತಿ ಹಿಂದಿನ ಚಕ್ರ ಎಂದ.  ಸಂಶಯಗೊಂಡ ಭಟ್ಟರು 'ನನ್ನ ಮನೆ ಇಲ್ಲೇ, ಅಲ್ಲಿಯೇ ಪಂಕ್ಚರ್ ಸರಿಮಾಡುತ್ತೇನೆ' ಎಂದು ಜೀಪು ಚಲಾಯಿಸಿದರು.
ಆದರೆ ಸ್ಕೂಟರ್ ಅಡ್ಡ ಹಾಕಿದ ಇಬ್ಬರು ಹತ್ತಿರ ಬಂದು, ಹೊಡೆಯತೊಡಗಿದರು. ಕೃಷಿಕ ಭಟ್ಟರು ಜೀಪ್‌ನಲ್ಲಿಯೇ ಕತ್ತಿ ಇಟ್ಟಿದ್ದರು. ಅದೇ ಕತ್ತಿಯಿಂದ ಹಲ್ಲೆ ನಡೆಸುತ್ತಿದ್ದವನಗೆ ಕಡಿದರು. ಆತ ಹೆದರಿ ಓಡಿ ಹೋದರೆ ಮತ್ತೊಬ್ಬ ಹಿಂಬದಿಯಿಂದ ಬಂದು ಕುತ್ತಿಗೆ ಬಿಗಿಯತೊಡಗಿದ್ದ. ಆತನಿಗೂ ತಿರುಗಿ ಕತ್ತಿಯಿಂದ ಕಡಿದರು. ಇಬ್ಬರು ಸ್ಕೂಟರ್ ಏರಿ ಓಡಿದರು.
ಭಟ್ಟರು ಅಲ್ಲೇ ಪಕ್ಕದ ಮನೆಗೆ ಹೋಗಿ ಜನರನ್ನು ಒಟ್ಟುಗೂಡಿಸಿ ಹಿಂಬಾಲಿಸಿದರು. ರಸ್ತೆ ಕೊಡೆಕಲ್‌ಗೆ ಕೊನೆಗೊಳ್ಳುತ್ತದೆ. ಅಲ್ಲಿ ಸ್ಕೂಟರ್ ಮಾತ್ರ ಇತ್ತು. ಇಬ್ಬರು ಕಾಡಿನ ಒಳಗೆ ಓಡಿ ಪರಾರಿಯಾದರು.  ದೋಚಲು ಬಂದವರು ಬೋಳಿಯಾರಿನ ಅಬ್ದುಲ್ಲ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement