14ರಂದು ಡಾ. ಕುರುಂಜಿಗೆ ಸಾರ್ವಜನಿಕ ಶ್ರದ್ಧಾಂಜಲಿ
ಸುಳ್ಯ: ಸುಳ್ಯದ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರಿಗೆ 14ರಂದು ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಏರ್ಪಡಿಸಲು ಸುಳ್ಯದ ನಾಗರಿಕರು ನಿರ್ಧರಿಸಿದ್ದಾರೆ. ಶುಕ್ರವಾರ ಲಯನ್ಸ್ ಸೇವಾ ಸದನದಲ್ಲಿ ನಡೆದ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಸಭೆಯಲ್ಲಿ ದಿನೇಶ್ಮಡಪ್ಪಾಡಿ, ಎನ್. ಜಯಪ್ರಕಾಶ್ ರೈ, ಎನ್.ಎ. ರಾಮಚಂದ್ರ, ವಿಶ್ವನಾಥ ರಾವ್, ಡಾ.ಎನ್.ಎ. ಜ್ಞಾನೇಶ್, ಕೆ.ಆರ್. ಗಂಗಾಧರ್, ಎಸ್. ಸಂಶುದ್ದೀನ್, ಎಂ. ವೆಂಕಪ್ಪ ಗೌಡ, ಎಂ. ಮೀನಾಕ್ಷಿ ಗೌಡ, ನಾರಾಯಣ ನೀರಬಿದಿರೆ, ಡಾ. ರೇವತಿ ನಂದನ್, ದೊಡ್ಡಣ್ಣ ಬರೆಮೇಲು, ಚಂದ್ರಶೇಖರ ಪೇರಾಲು, ಪಿ.ಎ. ಮಹಮ್ಮದ್, ಚಂದ್ರಶೇಖರ ನಂಜೆ, ಪಿ.ಎಸ್. ಗಂಗಾಧರ, ಪಿ.ಸಿ. ಜಯರಾಮ್, ಕೆ.ಟಿ. ವಿಶ್ವನಾಥ, ಡಾ.ಪ್ರಭಾಕರ ಶಿಶಿಲ, ಕೆ.ಎಂ. ಮುಸ್ತಫ, ಚಂದ್ರಾ ಕೋಲ್ಚಾರ್ ಇದ್ದರು.