ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾಟನ್ ಸಿಲ್ಕ್ ಮತ್ತು ಕ್ರಾಫ್ಟ್ ಎಕ್ಸ್‌ಪೋ- 15ರವರೆಗೆ

Vishwanath S
Updated On : 11 Aug 2013, 11:57 am

ಮಂಗಳೂರು: ಭಾರತದ ಅತಿದೊಡ್ಡ ಹ್ಯಾಂಡಿಕ್ರಾಫ್ಟ್ ಮತ್ತು ಹ್ಯಾಂಡ್‌ಲೂಮ್ ಪ್ರದರ್ಶನ ಮತ್ತು ಮಾರಾಟ ಮೇಳ 'ಕಾಟನ್ ಸಿಲ್ಕ್ ಮತ್ತು ಕ್ರಾಫ್ಟ್ ಎಕ್ಸ್‌ಪೋ' ನಗರದ ವುಡ್‌ಲ್ಯಾಂಡ್ ಸಭಾಂಗಣದಲ್ಲಿ ಆ. 7ರಂದು ಆರಂಭಗೊಂಡಿದೆ.
ಆ. 15ರವರೆಗೆ ನಡೆಯಲಿದ್ದು, ಬೆಳಗ್ಗೆ 11 ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ.
ಭಾರತ ಸರ್ಕಾರ ಗ್ರಾಮೀಣ ಹಸ್ತಕಲ ವಿಕಾಸ ಸಮಿತಿ ಸಚಿವಾಲಯ ಟೆಕ್ಸ್‌ಟೈಲ್ಸ್ ಇದರ ಆಯೋಜಕರಾಗಿದ್ದು, ಮಳಿಗೆಯಲ್ಲಿ ಸಿಲ್ಕ್, ಕಾಟನ್ ಸೀರೆಗಳು, ಡಿಸೈನರ್, ಸಿಲ್ಕ್, ಕಾಟನ್ ಸೂಟ್, ಕುರ್ತಿಸ್, ಟಾಪ್ಸ್, ಜೂಟ್, ಜುವೆಲ್ಲರಿ, ಟೆರ್ರಾಕೋಟ ಲಭ್ಯವಿದೆ. ಪ್ರತಿ ಖರೀದಿಗೆ ಆಕರ್ಷಕ ರಿಯಾಯಿತಿ ದರವಿದೆ.
ಉತ್ತರ ಪ್ರದೇಶದ ಲಕ್ನೋಚಿಕನ್, ಬನಾರಸಿ ಸಿಲ್ಕ್ ಸೀರೆಗಳು, ರಾಜಸ್ಥಾನದ ಸಾಂಪ್ರಾದಾಯಿಕ ಬಾಂದನಿ, ಕಚ್ಚಾ ಎಂಬ್ರಾಯಿಡರಿ ಸೀರೆ, ಮಧ್ಯಪ್ರದೇಶದ ಚಾಂದನಿ, ಸಾಂಪ್ರಾದಾಯಿಕ ಮಹೇಶ್ವರಿ ಬಾಟಿಕ್ ಪ್ರಿಂಟ್ ಸೀರೆ, ಕೊಲ್ಕತ್ತಾದ ಕಾಟನ್ ಸೀರೆ, ಅಸ್ಸಾಂನ ಸಿಲ್ಕ್ ಸೀರೆ, ಬಿಹಾರದ ಕೋಸ, ಟಸ್ಸರ್ ಸಿಲ್ಕ್ ಸೀರೆ, ಜಮ್ಮು ಕಾಶೀರದ ಎಂಬ್ರಾಯಿಡರ್ ಸಿಲ್ಕ್ ಮತ್ತು ಪಾಶ್‌ಮಿನ ದುಪ್ಪಟಾ, ಪಶ್ಚಿಮಬಂಗಾಳದ ಕಾಂತ, ಬಾಲಪುರಿ, ಜಮದಾನಿ, ತಂಗೈಲ್ ವಸ್ತುಗಳು. ಮಿರ್ಜಾಪುರ ಕಾರ್‌ಪೆಟ್, ಶಹನಪುರ ಫರ್ನಿಚರ್, ಫಿರೋಜಾಬಾದ್ ಗ್ಲಾಸ್, ಪುರ್ದಿಲ್ ನಾಗರ್ ಜ್ಯುವೆಲ್ಲರಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement