25ರಂದು ರಥ ಸ್ವರ್ಣ ಮುಹೂರ್ತಕ್ಕೆ ಚಾಲನೆ
ಮೂಲ್ಕಿ: ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ರಾಜ್ಯದಲ್ಲೇ ಅತ್ಯಂತ ಎತ್ತರವಾದ ಚಿನ್ನದ ರಥದ ನಿರ್ಮಾಣ ಕಾರ್ಯ ನಡೆಯಲಿದ್ದು, ಸ್ವರ್ಣ ಮುಹೂರ್ತ 25ರಂದು ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಚಿನ್ನದ ರಥದ ಸ್ವರ್ಣ ಮುಹೂರ್ತಕ್ಕೆ ಚಾಲನೆ ನೀಡಲಿದ್ದಾರೆ. ಕಟೀಲು ದೇವಳದ ಭ್ರಾಮರಿಯ ಮೂಲಸ್ಥಾನ ಕುದ್ರುವಿನಲ್ಲಿ 2 ಕೋಟಿ ವೆಚ್ಚದಲ್ಲಿ ಕೆರೆಗಳ ನಿರ್ಮಾಣ, ಯಾಜ್ಞಕ ವೃಕ್ಷಗಳ ನೆಡುವಿಕೆ, ಮಾಡು ರಹಿತ ಗರ್ಭಗುಡಿ ನಿರ್ಮಾಣ ಕಾಮಗಾರಿಗಳನ್ನು ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಸಲಿದ್ದಾರೆ.