ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೈಸೂರಿನವ ಸಮುದ್ರ ಪಾಲು?

Mainashree
Updated On : 11 Aug 2013, 10:32 am

ಮಂಗಳೂರು: ಉಳ್ಳಾಲ ಸೋಮೇಶ್ವರದಲ್ಲಿ ಭಾನುವಾರ ಸಮುದ್ರಕ್ಕಿಳಿದ ಮೈಸೂರು ಮೂಲದ ನಾಲ್ಕು ಯುವಕರ ಪೈಕಿ ಒಬ್ಬ ಸಮುದ್ರ ಪಾಲಾದ ಘಟನೆ ಸಂಭವಿಸಿದೆ. ಉಳಿದ ಮೂವರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಮೈಸೂರಿನಿಂದ ಬಂದಿದ್ದ ನಾಲ್ವರು ಮಧ್ಯಾಹ್ನ ಸೋಮೇಶ್ವರದಲ್ಲಿ ಸಮುದ್ರಕ್ಕೆ ಇಳಿದಿದ್ದಾರೆ. ಸಮುದ್ರಕ್ಕೆ ಇಳಿಯಬೇಡಿ ಎಂದು ಜೀವರಕ್ಷಕ ಸಿಬ್ಬಂದಿ ಯುವಕರಿಗೆ ತಿಳಿ ಹೇಳಿದರೂ, ಕೇಳದೆ ಮುಂದುವರಿದಿದ್ದಾರೆ. ಅಷ್ಟರಲ್ಲಿ ನಾಲ್ವರು ನೀರಿನ ಸೆಳೆತಕ್ಕೆ ಸಿಲುಕಿದರು. ತಕ್ಷಣವೇ ಅಲ್ಲಿದ್ದ ಜೀವರಕ್ಷಕ ಸಿಬ್ಬಂದಿ ಸಮುದ್ರಕ್ಕೆ ಧುಮುಕಿ ಮೂವರನ್ನು ಅಪಾಯದಿಂದ ಪಾರು ಮಾಡುವಲ್ಲಿ ಸಫಲರಾಗಿದ್ದಾರೆ. ಆದರೆ ಒಬ್ಬಾತ ನೀರು ಪಾಲಾಗಿದ್ದಾನೆ ಎನ್ನಲಾಗಿದೆ. ಜೀವರಕ್ಷಣೆ ಪಡೆ ಕೂಡಲೇ ಮೂವರು ಯುವಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವುದಾಗಿ ಹೇಳಿ ಹೋದವರು ಕಾಲ್ಕಿತ್ತಿದ್ದಾರೆ. ಆದ್ದರಿಂದ ಯುವಕರ ತಂಡದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ ಎಂದು ಜೀವರಕ್ಷಕ ಸಿಬ್ಬಂದಿ ಹೇಳಿದ್ದಾರೆ. ಜೀವರಕ್ಷಕ ಸಿಬ್ಬಂದಿ ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೂ ಹೆಚ್ಚಿನ ವಿವರ ತಿಳಿದಿಲ್ಲ, ಆದ್ದರಿಂದ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement