ಸಾಲ ಹಿಂದಿರುಗಿಸಲು ಹೇಳಿದ್ದಕ್ಕೆ ಹಲ್ಲೆ!
ಉಪ್ಪಿನಂಗಡಿ: ಕೊಟ್ಟಿದ್ದ 90 ಸಾಲ ಮರುಪಾವತಿಸುವಂತೆ ಕೇಳಿದ್ದಕ್ಕೆ ಕೋಲಿನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಉರುವಾಲು ಗ್ರಾಮದ ಚೆಂಡೆತ್ತಿಮಾರ್ ಎಂಬಲ್ಲಿ ನಡೆದಿದೆ. ಧರ್ಮರಾಜ ಪೂಜಾರಿ(46) ಸಾಲ ನೀಡಿ ಪೆಟ್ಟು ತಿಂದವರು. ಧರ್ಮರಾಜ ಪೂಜಾರಿ ಅವರು ರಾಜೇಶ್ ಎಂಬವರಿಗೆ ನೀಡಿದ್ದರು ಎನ್ನಲಾದ 90 ಸಾಲದ ಹಣವನ್ನು ಹಿಂತಿರುಗಿಸುವಂತೆ ಶನಿವಾರ ಮಧ್ಯಾಹ್ನ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಕುಪಿತರಾದ ರಾಜೇಶ್ ಅವರ ಅಣ್ಣ ಮತ್ತು ತಾಯಿ ರಾತ್ರಿವೇಳೆ ಧರ್ಮರಾಜ ಪೂಜಾರಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಿದಿರ ಕೋಲಿನಿಂದ ಮನಸೋ ಇಚ್ಛೆ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಗಾಯಾಳು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.