ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೈರಂಗಳ, ವಗ್ಗದಲ್ಲಿ ಆಟಿಡೊಂಜಿ ಕೂಟ

Lingaraj Badiger
Updated On : 14 Aug 2013, 12:07 pm

ಬಂಟ್ವಾಳ: ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಇತ್ತೀಚೆಗೆ ಆಟಿಡೊಂಜಿ ಕೂಟ- 2013 ಕಾರ್ಯಕ್ರಮ ನಡೆಯಿತು.
ಈ ಪ್ರಯುಕ್ತ, ವಿದ್ಯಾರ್ಥಿಗಳ ಹೆತ್ತವರು ತಯಾರಿಸಿದ ತುಳುನಾಡಿನ ವಿಶಿಷ್ಟ ತಿಂಡಿಗಳ ಪ್ರದರ್ಶನ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಾಟಿವೈದ್ಯ ಬಾಲಕೃಷ್ಣ ರೈ ಮುಂಡಾಜೆ ಮಾತನಾಡಿ, ಆಟಿ ತಿಂಗಳ ವೈಶಿಷ್ಟ್ಯತೆಯನ್ನು ವಿವರಿಸಿದರು.
ಸಂಸ್ಥೆಯ ಸಂಚಾಲಕ ಟಿ.ಜಿ. ರಾಜಾರಾಮ ಭಟ್, ಹಿರಿಯ ಶಿಕ್ಷಕ ರಾಮ ರಾವ್, ಪ್ರಾಂಶುಪಾಲ ಪ್ರವೀಣ್ ಕುಮಾರ್, ಪ್ರೌಢಶಾಲೆ ಮತ್ತು ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಯೋಗಿತಾ ಮತ್ತು ಸಂಧ್ಯಾ ಕೆ. ಇದ್ದರು.
ಸಹ ಶಿಕ್ಷಕಿ ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯಾ ಕೆ. ಸ್ವಾಗತಿಸಿದರು. ಸವಿತಾ ವಂದಿಸಿದರು.
ವಗ್ಗದಲ್ಲಿ: ಕಾವಳಪಡೂರು ವಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ತುಳು ನಾಡಿನ ಸಂಸ್ಕೃತಿ, ಆಹಾರ ಪದ್ಧತಿಯನ್ನು ಬಿಂಬಿಸುವ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಸೋಮವಾರ ಆಚರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಪಿ. ಜಿನರಾಜ ಆರಿಗರು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಎಂ. ಮರಿಸ್ವಾಮಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸ್ಥಳೀಯ ಆಯುರ್ವೇದ ತಜ್ಞರಾದ ಡಾ. ಪ್ರವೀಣ್ ಸೇರಾ ಆಗಮಿಸಿ, ವಿದ್ಯಾರ್ಥಿಗಳಿಗೆ ತುಳುನಾಡಿನಲ್ಲಿ ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ವಿವಿಧ ಆಯುರ್ವೇದೀಯ ಔಷಧಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು. ಮಧ್ವ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಜಯಾ, ತುಳುನಾಡಿನ ವಿಶಿಷ್ಟ ಆಹಾರ ಪದ್ಧತಿ ಕುರಿತು ತಿಳಿಸಿದರು.
ಸಂಸ್ಥೆಯ ಮುಖ್ಯ ಶಿಕ್ಷಕರಾದ ಶೇಕ್ ಆದಂ ಸಾಹೇಬ್ ಪ್ರಾಸ್ತಾವಿಕವಾಗಿ ತುಳುನಾಡಿನ ಆಹಾರ ಪದ್ಧತಿಯ ಹಿನ್ನೆಲೆ, ಅದರ ವೈಜ್ಞಾನಿಕ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಬಾಂಬಿಲದ ದಾನಿಗಳಾದ ಬಿಗ್ ಹೌಸ್‌ನ ಅಬ್ದುಲ್ ರಝಾಕ್, ಕಾವಳಪಡೂರಿನ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ರಝಾಕ್, ಲಕ್ಷ್ಮಿನಾರಾಯಣ ಶರ್ಮ, ಧನಂಜಯ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ವಿವಿಧ ತರಗತಿಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಮಾಡುವ ವಿವಿಧ ಸಾಂಪ್ರದಾಯಿಕ ಅಡುಗೆಗಳ ಪ್ರದರ್ಶನ ಏರ್ಪಡಿಸಿದರು. ವಿದ್ಯಾಥಿಗಳ ಪಾಲಕ, ಪೋಷಕರು ಆಗಮಿಸಿ ತುಳುನಾಡಿನ ವಿವಿಧ ಆಹಾರವನ್ನು ಸವಿದರು.
ಮಧ್ಯಾಹ್ನದ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನರಂಜನೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು  ಶಿಕ್ಷಕಿ ಸುಶೀಲ ಜಿ. ನಿರೂಪಿಸಿ, ಶಿಕ್ಷಕ ಫ್ರೆಡ್ರಿಕ್ ಡಿ'ಸೋಜಾ ವಂದಿಸಿದರು. ಶಿಕ್ಷಕಿ ಪದ್ಮಲತಾ, ಲೈಲಾ ಪವರ್‌ನ್, ಶಿಕ್ಷಕ ಶ್ರೀನಿವಾಸ ನಾಯ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement