ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೋಟಿ ದುರ್ಬಲರಿಗಿಂತ ಒಬ್ಬ ಸಬಲ ಉತ್ತಮ: ರಾಘವೇಶ್ವರ ಶ್ರೀ

Lingaraj Badiger
Updated On : 14 Aug 2013, 12:07 pm

ವಿಟ್ಲ:  ಒಂದೇ ರೀತಿಯ ಗುಣ ಮತ್ತು ಅದೇ ರೀತಿಯ ಮನಸ್ಸಿನವರ ಮಿಲನ ಸಹಜವಾಗಿರುತ್ತದೆ. ಕೋಟಿ ದುರ್ಬಲರಿಗಿಂತ ಒಬ್ಬ ಸಬಲ ಇದ್ದರೆ ಉತ್ತಮ ಎಂದು ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.
ಮಾಣಿಯ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ 20ನೇ ವಿಜಯ ಚಾತುರ್ಮಾಸ್ಯದ ಅಂಗವಾಗಿ ಹಮ್ಮಿಕೊಂಡ ದ್ವಿತೀಯ ರಾಮಕಥಾ ಸರಣಿಯ ಎರಡನೇ ದಿನ ಸೋಮವಾರ ಅವರು ಪ್ರವಚನ ನೀಡಿದರು.
ಗೀತ ಸಾಹಿತ್ಯವನ್ನು ಗಜಾನನ ಶರ್ಮ ಒದಗಿಸಿದರೆ, ಗಾಯಕರಾಗಿ ಶ್ರೀಪಾದ ಭಟ್ ಕಡತೋಕ, ಗರ್ತಿಕೆರೆ ರಾಗಣ್ಣ, ಸತ್ಯಜಿತ್ ಕೋಲ್ಕತ್ತಾ, ಸುಭದ್ರಾ, ಟಿ.ವಿ. ಗಿರಿ, ಉಮಾ ಶಾಸ್ತ್ರಿ, ಅನಿರೂಪಾ ಕೋಲ್ಕತ್ತಾ, ಸ್ವಾತಿ ಕೋಲ್ಕತ್ತಾ, ಹಾರ್ಮೋನಿಯಮ್‌ನಲ್ಲಿ ಪ್ರಜ್ಞಾನ ಲಿಲಾಶಕ ಉಪಾಧ್ಯಾಯ, ಸಿತಾರ್‌ನಲ್ಲಿ ಸುಬ್ರಹ್ಮಣ್ಯ ಹೆಗಡೆ, ತಬಲಾದಲ್ಲಿ ಗಣೇಶ್ ಗುಂಡ್ಕಲ್ ಸಹಕರಿಸಿದರು.
ನೀರ್ನಳ್ಳಿ ಗಣಪತಿ ಅವರ ಕುಂಚ ಹಾಡಿಗೆ ತಕ್ಕ ಹಾಗೆ ನಲಿಯುತಿತ್ತು. ರೂಪಕಗಳು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಸಾಹಿತ್ಯ, ನಿರ್ದೇಶನದಲ್ಲಿ ಮೂಡಿಬಂದವು.
ರೂಪಕದಲ್ಲಿ ವಿಷ್ಣು ಭಟ್ ಮೂರೂರು, ಈಶ್ವರ ಭಟ್ ಕಟ್ಟೆ, ವಿಶ್ವೇಶ್ವರ ಹೆಗಡೆ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement