ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೋಟೆ ಆಂಜನೇಯ ದೇಗುಲ ಪುನರ್ ನಿರ್ಮಾಣಕ್ಕೆ 19ರಂದು ಮುಹೂರ್ತ

Vishwanath S
Updated On : 15 Aug 2013, 11:36 am

ಗಂಗೊಳ್ಳಿ: ಕುಂದಾಪುರದ ಪ್ರಥಮ ದೇವಸ್ಥಾನ ಎಂದು ದಾಖಲಿಸಲ್ಪಟ್ಟಿರುವ ಸುಮಾರು 850 ವರ್ಷದ ಇತಿಹಾಸ ಹೊಂದಿದೆ ಎಂದು ಹೇಳಲಾದ ಸ್ಥಳೀಯ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟಿರುವ ಪಂಚಗಂಗಾವಳಿ ತೀರದ ಬಳಿ ಎತ್ತರದ ಪ್ರದೇಶದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನವನ್ನು ಧಾರ್ಮಿಕ ಸಂಪ್ರದಾಯಕ್ಕೆ ತಕ್ಕಂತೆ ಭವ್ಯವಾಗಿ ಪುನರ್ ನಿರ್ಮಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ, ದೇವಾಲಯದ ಪುನರ್ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವ ನವದೆಹಲಿಯ ಶ್ರೀ ಹರಿಗುರು ಸೇವಾ ಪ್ರತಿಷ್ಠಾನದ ಶ್ರೀನಿವಾಸ ಪ್ರಭು ತಜ್ಞರ ಸಹಕಾರದಿಂದ ರಚಿಸಿರುವ ನಿರ್ಮಾಣಗೊಳ್ಳಲಿರುವ ದೇವಾಲಯದ ನಕ್ಷೆ, ರೂಪುರೇಖೆಯನ್ನು ವಿವರಿಸಿದರು.
ಪುರಾತನವಾದ ಈ ದೇವಸ್ಥಾನವನ್ನು 1945ರಲ್ಲಿ ವಕೀಲರಾದ ಕೆ. ನರಸಿಂಹ ಕಾಮತ್ ಆಡಳಿತ ಮೊಕ್ತೇಸರರಾಗಿದ್ದ ಕಾಲದಲ್ಲಿ ಜೀರ್ಣೋದ್ಧಾರ ಮಾಡಿದ ದಾಖಲೆ ಇದೆ. ಕೆಳದಿ ಅರಸರ ಕಾಲದಲ್ಲಿ ಈ ದೇವಸ್ಥಾನದ ಬಗ್ಗೆ ಶಿಲಾಶಾಸನ ಬರೆಸಿರುವುದು ತಿಳಿದು ಬರುತ್ತದೆ. ಕುಂದಾಪುರ ಕೋಟೆಯ ಗುಡಿಗಳ ಪಕ್ಕದಲ್ಲಿದ್ದ ಎರಡು ದತ್ತಿ ಶಾಸನಗಳನ್ನು ಸಬ್ ಕಲೆಕ್ಟರ್ ಕಚೇರಿಯ ಸಮೀಪದಲ್ಲಿಡಲಾಗಿತ್ತು. ಉಪ ವಿಭಾಗಾಧಿಕಾರಿಗಳ ಕಚೇರಿ ಉಸ್ತುವಾರಿಯಲ್ಲಿದ್ದ ಈ ಎರಡೂ ಶಿಲಾ ಶಾಸನದಲ್ಲಿ ಪಂಚಗಂಗಾವಳಿ ಕೋಟೆಯ ಎಡಭಾಗದಲ್ಲಿ ದೇವಿ ಮಹಾಲಕುಮಿ ಗುಡಿ ಇದ್ದ ಬಗ್ಗೆ ಬಲಭಾಗದಲ್ಲಿ ಆಂಜನೇಯ ಸ್ವಾಮಿ ಗುಡಿ ಇದ್ದ ಬಗ್ಗೆ ಹಾಗೂ ಕೆಳದಿ ವೆಂಕಟಪ್ಪ ನಾಯಕನ ವಿವರಗಳಿವೆ ಎಂದು ಮಾಹಿತಿ ನೀಡಿದರು.
ಆ. 19 ರಂದು ದೇವಳದ ಪುನರ್ ನಿರ್ಮಾಣ ಕಾರ್ಯಕ್ಕೆ ಮುಹೂರ್ತ ನಡೆಯಲಿದೆ. ಇರುವ ಸ್ಥಳಾವಕಾಶ ಉಪಯೋಗಿಸಿಕೊಂಡು ಅತ್ಯಾಕರ್ಷಕವಾಗಿ ದೇವಾಲಯ ಪುನರ್ ನಿರ್ಮಿಸಲು ಸಂಕಲ್ಪಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement