ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೆಂಗಳೂರು ಯುವಕನ ಶವ ಗುಂಡ್ಯದಲ್ಲಿ ಪತ್ತೆ

Mainashree
Updated On : 15 Aug 2013, 12:22 pm

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಗುಂಡ್ಯದ ಗುಂಡ್ಯತೋಟ ರಕ್ಷಿತಾರಣ್ಯದಲ್ಲಿ ಬೆಂಗಳೂರಿನ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬುಧವಾರ ಬೆಳಕಿಗೆ ಬಂದಿದೆ.
 ಸುಮಾರು 22 ವರ್ಷ ಪ್ರಾಯದ ಈ ಯುವಕನ ಬಳಿ ಹಿಂದಿ ಭಾಷೆಯಲ್ಲಿ ಬರೆದ ಪತ್ರವೊಂದು ಸಿಕ್ಕಿದ್ದು, ಕೆಲವೊಂದು ಕಾರ್ಡ್‌ಗಳು ಪತ್ತೆಯಾಗಿವೆ.
ಪತ್ತೆಯಾದ ದಾಖಲೆಯೊಂದರಲ್ಲಿ ಆತನ ಹೆಸರು ಕಿಶೋರ್ ಬಿನ್ ಸುಬ್ಬಯ್ಯ, 112ಡಿ ಮಹಕಲ್ಲಿ ಅಂಚೆ, ದಾಸ ನಗರ ಹೋಬಳಿ, ಬೆಂಗಳೂರು ಉತ್ತರ ಎಂಬ ಉಲ್ಲೇಖವಿದೆ.  ಕಾಡಿನಲ್ಲಿ ಮರವೊಂದಕ್ಕೆ ಸೀರೆಯಿಂದ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಈತ ಪ್ರೇಮ ವೈಫಲ್ಯದಿಂದ ಈ ಕೃತ್ಯವೆಸಗಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement