ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದಿನಿಂದ ಪೆಟ್ರೋಲಿಯಂ ಗುತ್ತಿಗೆದಾರರ ಮುಷ್ಕರ

Lingaraj Badiger
Updated On : 16 Aug 2013, 12:04 pm

ಮಂಗಳೂರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನಿಂದ ಪೆಟ್ರೋಲಿಯಂ ಉತ್ಪನ್ನ ಪೂರೈಸುವ ಮಂಗಳೂರು ವಿಭಾಗದ ಗುತ್ತಿಗೆದಾರರು ಆ.16ರಿಂದ ಅನಿರ್ದಿಷ್ಟ ಪ್ರತಿಭಟನೆಗೆ ಇಳಿದರೆ, ಡೀಲರ್‌ಗಳು ವಿರೋಧಿಸಿದ್ದಾರೆ. ಹಾಗಾಗಿ ಪೆಟ್ರೋಲಿಯಂ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಇದ್ದು, ತಮ್ಮ ಟ್ಯಾಂಕರ್‌ಗಳಿಗೆ ರಕ್ಷಣೆ ಒದಗಿಸುವಂತೆ ಡೀಲರ್‌ಗಳು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
   ಐಒಸಿ ವಿಜಿಲೆನ್ಸ್ ತಂಡ ದಾಳಿ ನಡೆಸಿ ಪೆಟ್ರೋಲಿಯಂ ಉತ್ಪನ್ನ ದುರ್ಬಳಕೆಯನ್ನು ಪತ್ತೆಹಚ್ಚಿ 10 ಮಂದಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ಇದನ್ನು ವಿರೋಧಿಸಿ ಗುತ್ತಿಗೆದಾರರು ಹೋರಾಟಕ್ಕೆ ಇಳಿದಿದ್ದಾರೆ.
 ಸುಮಾರು 300 ಟ್ಯಾಂಕರ್‌ಗಳು ಇದ್ದು, 80 ಟ್ಯಾಂಕರ್‌ಗಳು ಡೀಲರ್ ಬಳಿ ಇವೆ. ಗುತ್ತಿಗೆದಾರರು ಮುಷ್ಕರಕ್ಕೆ ಕರೆ ನೀಡಿರುವುದರಿಂದ ಡೀಲರ್‌ಗಳ ಟ್ಯಾಂಕರ್ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ತಮ್ಮ ಟ್ಯಾಂಕರ್ ಓಡಾಟಕ್ಕೆ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಡೀಲರ್‌ಗಳು ಮನವಿಯಲ್ಲಿ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಕೊರತೆ ತಲೆದೋರಲಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ.
ಹಲ್ಲೆಗೆ ಖಂಡನೆ
ಉಪ್ಪಿನಂಗಡಿ: ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ಟರ ಮೇಲೆ ಇತ್ತೀಚೆಗೆ ನಡೆದ ದೈಹಿಕ ಹಲ್ಲೆ ಖಂಡನಾರ್ಹ ಎಂದಿರುವ ಯಕ್ಷಗಾನ ಕಲಾವಿದರ ಸಂಘಟನೆಗಳು, ಕಲೆಯನ್ನೇ ಆಶ್ರಯಿಸಿ ಬದುಕುವ ಕಲಾವಿದರು ಭಯದಿಂದ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಯಕ್ಷಗಾನ ಕ್ಷೇತ್ರದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಕೃತ್ಯಗಳು ಮರುಕಳಿಸದಂತೆ ಕಲಾಸಕ್ತರು, ಸಂಘಟಕರು ಮತ್ತು ಸರ್ಕಾರ ಸೂಕ್ತ ಕ್ರಮ ವಹಿಸಬೇಕೆಂದು ಯಕ್ಷಕೂಟ ನಾಳ(ರಿ), ಉಪ್ಪಿನಂಗಡಿಯ ಸೌಹಾರ್ದ ಯಕ್ಷಗಾನ ಸಮಿತಿ ಮತ್ತು ಯಕ್ಷಸಂಗಮ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement