ಜಾನುವಾರುಗಳ ಅಕ್ರಮ ಸಾಗಾಟ; ಮೂವರ ಬಂಧನ
ಉಪ್ಪಿನಂಗಡಿ: ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಮೂರು ದನಗಳು ಹಾಗೂ ಮೂವರನ್ನು ವಾಹನದೊಂದಿಗೆ ವಶಕ್ಕೆ ತೆಗೆದುಕೊಂಡಿದ್ದಾರೆ. ಬುಧವಾರ ರಾತ್ರಿ ಚಿಕ್ಕಮಗಳೂರಿನ ಕಳಸದಿಂದ ಕೇರಳದ ಕಸಾಯಿಖಾನೆಗೆ ಪಿಕಪ್ ವಾಹನದಲ್ಲಿ ಮೂರು ದನಗಳನ್ನು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ಅಕ್ರಮ ಸಾಗಾಟವೆಂದು ಖಚಿತ ಪಡಿಸಿದ ಬಳಿಕ ವಶಕ್ಕೆ ತೆಗೆದುಕೊಂಡರು. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಸುರೇಶ್, ಬೆಳ್ತಂಗಡಿ ತಾಲೂಕಿನ ಕಿಲ್ಲೂರು ನಿವಾಸಿ ವಿಶ್ವನಾಥ, ಮೂಡಿಗೆರೆ ನಿವಾಸಿ ರಮೇಶ ಎಂಬವರು ಬಂಧಿತರು. ಕಾರ್ಯಾಚರಣೆ ವೇಳೆ ಈಶ್ವರಮಂಗಲ ಮೂಲದ ಹನೀಫ್ ಎಂಬಾತ ಪರಾರಿಯಾಗಿದ್ದಾನೆ.