ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ನಮೋ ಬ್ರಿಗೇಡ್' ಬೃಹತ್ ವಾಹನ ರ್ಯಾಲಿ

Rashmi Kasaragodu
Updated On : 16 Aug 2013, 12:04 pm

ಮಂಗಳೂರು: 'ಒಂದು ಭಾರತ-ಶ್ರೇಷ್ಠ ಭಾರತ' ಎಂಬ ಧ್ಯೇಯ ವಾಕ್ಯದೊಂದಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವ ಮೂಲಕ ಭವ್ಯ ಭಾರತದ ಪುನರ್ ನಿರ್ಮಾಣ ಸಂಕಲ್ಪಕ್ಕೆ ಮುಂದಾಗಿರುವ ಸಮಾನ ಮನಸ್ಕರ ಸಂಘಟನೆ 'ನಮೋ ಬ್ರಿಗೇಡ್' ಮಂಗಳೂರಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ವೇಳೆ ಬೃಹತ್ ವಾಹನ ರ್ಯಾಲಿ ನಡೆಸಿತು.
 ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಜಾಥಾ ಪ್ರಾರಂಭಗೊಂಡಿತು. ಅಲ್ಲಿಂದ ಲೇಡಿಹಿಲ್, ಲಾಲ್ಬಾಗ್, ಪಿವಿಎಸ್, ಅಂಬೇಡ್ಕರ್ ವೃತ್ತ, ಹಂಪನಕಟ್ಟೆ, ಆರ್ಟಿಒ ಮೂಲಕ ಕೆಎಸ್ರಾವ್ ರಸ್ತೆ, ಡೊಂಗರಕೇರಿ, ಮಣ್ಣಗುಡ್ಡೆಯಿಂದ ಮತ್ತೆ ಕರಾವಳಿ ಮೈದಾನಕ್ಕೆ ಆಗಮಿಸಿತು. ಬಳಿಕ ವಂದೇ ಮಾತರಂನೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು. ರ್ಯಾಲಿಯಲ್ಲಿ ಸುಮಾರು 800ಕ್ಕೂ ಅಧಿಕ ದ್ವಿಚಕ್ರ ವಾಹನಗಳು, 50ಕ್ಕೂ ಹೆಚ್ಚು ಇತರೆ ವಾಹನ, 2,100 ನಮೋ ಬ್ರಿಗೇಡ್ನ ಕಾರ್ಯಕರ್ತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರ್ಯಾಲಿಗಾಗಿಯೇ ಸುಮಾರು 700 ಮೋದಿ ಕುರಿತ ಘೋಷಣೆಯ ಟೀಶರ್ಟ್, ಮೋದಿ ಮುಖವಾಡ, ಮೋದಿ ಕುರಿತ ಬರಹವುಳ್ಳ ಛತ್ರಿಯನ್ನು ಹೊಂದಿದ್ದರೆ, ವಾಹನಗಳಲ್ಲಿ ಮೋದಿ ಬಗೆಗಿನ ಸ್ಟಿಕ್ಕರ್ ಇತ್ತು. ರ್ಯಾಲಿಯ ಮುಂಚೂಣಿಯಲ್ಲಿ ನರೇಂದ್ರ ಮೋದಿ ಛದ್ಮವೇಷಧಾರಿ ಗಮನ ಸೆಳೆಯುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement