ಮರಳಲ್ಲಿ ಅರಳಿದ ಬೃಹತ್ ಭಾರತ
ನಿಟ್ಟೆ: ನಿಟ್ಟೆ ವಿದ್ಯಾಸಂಸ್ಥೆಯ ಆವರಣದಲ್ಲಿ ಸ್ವಾತಂತ್ರ್ಯೋತ್ಸವವನ್ನು ಭಾರತದ ಮರಳು ಶಿಲ್ಪ ರಚಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಮಣಿಪಾಲದ ಮರಳು ಚಿತ್ರಕಾರ ಶ್ರೀನಾಥ್ ನಿರ್ದೇಶನದೊಂದಿಗೆ ಸಂಸ್ಥೆಯ ಸುಮಾರು 800 ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ವರ್ಗದವರ ಸಹಕಾರದಲ್ಲಿ ವಿದ್ಯಾಲಯದ ಆವರಣದಲ್ಲಿರುವ ಹೊರಾಂಗಣ ಸಭಾಂಗಣದೊಳಗೆ ಸುಮಾರು 11,500 ಚದರ ಅಡಿ ವಿಸ್ತೀರ್ಣದಲ್ಲಿ ಭಾರತದ ಮರಳು ಶಿಲ್ಪ ರಚಿಸಲಾಯಿತು. ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್. ವಿನಯ ಹೆಗ್ಡೆ ಧ್ವಜಾರೋಹಣ ನೆರವೇರಿಸಿದರು.