ವೆಬ್ಸೈಟ್ ಛಾಯಾಗ್ರಾಹಕ ಕುಕ್ಕಾಜೆ ಬಿಡುಗಡೆ
ಮಂಗಳೂರು: ಅತ್ಯಾಚಾರ ಆರೋಪದಡಿಯಲ್ಲಿ ಬಂಧಿತರಾಗಿದ್ದ ವೆಬ್ಸೈಟ್ವೊಂದರ ಛಾಯಾಗ್ರಾಹಕ ದಯಾ ಕುಕ್ಕಾಜೆ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬುಧವಾರ ರಾತ್ರಿ ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನಂತೆ ಪೊಲೀಸರು ದಯಾ ಕುಕ್ಕಾಜೆಯನ್ನು ಬಂಧಿಸಿದ್ದರು. ಗುರುವಾರ ದಿನವಿಡೀ ಪೊಲೀಸ್ ಕಮಿಷನರ್ ಹಾಗೂ ಎಸಿಪಿ ಸಮ್ಮುಖದಲ್ಲಿ ಸುದೀರ್ಘ ವಿಚಾರಣೆ ನಡೆದಿದ್ದು, ಬಳಿಕ ಈ ಆರೋಪದಲ್ಲಿ ಹುರುಳಿಲ್ಲದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕುಕ್ಕಾಜೆಯನ್ನು ಬಿಡುಗಡೆ ಮಾಡಿದ್ದಾರೆ. ದೂರು ನೀಡಿರುವ ವಿದ್ಯಾರ್ಥಿನಿಗೆ ಕನ್ನಡ ಭಾಷೆ ತಿಳಿಯದಿದ್ದರೂ ಆಕೆ ಕನ್ನಡದಲ್ಲಿಯೇ ದೂರು ನೀಡಿದ್ದು ಅನುಮಾನಕ್ಕೆ ಕಾರಣವಾಗಿತ್ತು.