ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದು ಪೋಸ್ಟ್‌ಕಾರ್ಡ್ ಅಭಿಯಾನ

Rashmi Kasaragodu
Updated On : 17 Aug 2013, 1:32 am

ಮಂಗಳೂರು: ವನ್ಯಚಾರಣ ಬಳಗ ಮತ್ತು ಕರಾವಳಿ ಯುವ ಸಿಂಚನ ಸದಸ್ಯರ ವತಿಯಿಂದ ಆ.17 ರಂದು ಸಂಜೆ 5ಕ್ಕೆ ಕದ್ರಿ ಪಾರ್ಕಿನಲ್ಲಿ ಎತ್ತಿನಹೊಳೆ ಯೋಜನೆ, ಪಶ್ಚಿಮಘಟ್ಟ ಮತ್ತು ನೇತ್ರಾವತಿ ನದಿಯ ಬಗ್ಗೆ ಮಾಹಿತಿ ಕುರಿತ ಕರಪತ್ರ ನೀಡುವ 'ಪೋಸ್ಟ್‌ಕಾರ್ಡ್ ಅಭಿಯಾನ' ನಡೆಯಲಿದೆ. ದ.ಕ. ಜಿಲ್ಲೆಯ ಬದುಕಿಗೆ ಚೇತನವಾಗಿರುವ ನೇತ್ರಾವತಿ ನದಿಗೆ ಮಾರಕವಾಗಲಿರುವ ಎತ್ತಿನಹೊಳೆ ಯೋಜನೆ ಕಾರ್ಯಗತವಾದರೆ ತುಳುನಾಡ ಕೃಷಿ ಮತ್ತು ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಲಿದೆ. ಯೋಜನೆಯ ಕುರಿತು ಜಿಲ್ಲೆಯ ಜನರಿಗೆ ಸ್ಪಷ್ಟ ಮಾಹಿತಿ ಮತ್ತು ತಿಳವಳಿಕೆ ಇಲ್ಲದ ಕಾರಣ ಯೋಜನೆ ವಿರುದ್ಧ ಜಿಲ್ಲೆಯ ಜನರಿನ್ನೂ ಜಾಗೃತಗೊಂಡಿಲ್ಲ. ಈ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ವನ್ಯಚಾರಣ ಬಳಗ ಸಂಚಾಲಕ ದಿನೇಶ್ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement