ಶಿಬರೂರು ಹಯಗ್ರೀವ ತಂತ್ರಿ ನಿಧನ
ಮೂಲ್ಕಿ: ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳದ ತಂತ್ರಿಗಳಾದ ಶಿಬರೂರು ಹಯಗ್ರೀವ ತಂತ್ರಿಗಳು ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಕಳೆದ ಸುಮಾರು 6 ದಶಕಗಳಿಂದ ದೇವಳದ ತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಅವರು ತಮ್ಮ ಅವಧಿಯಲ್ಲಿ ದೇವಳದಲ್ಲಿ ನಾಲ್ಕು ಬ್ರಹ್ಮಕಲಶಗಳನ್ನು ಪ್ರತಿಷ್ಠಾಪಿಸಿದ್ದು, ಕಟೀಲು ದೇವಳ ಸೇರಿದಂತೆ 12 ದೇವಳಗಳಲ್ಲಿ ಹಾಗೂ ಹಲವಾರು ದೇವಸ್ಥಾನಗಳಲ್ಲಿ ತಂತ್ರಿಗಳಾಗಿ ಸೇವೆ ಸಲ್ಲಿಸಿದ್ದರು. ಮೃತರಿಗೆ ಪತ್ನಿ, ಪುತ್ರ ವೇದವ್ಯಾಸ ತಂತ್ರಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.