ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದು ಅಮ್ಮನ ಸಂದೇಶ ಸಾರುವ ರಥಯಾತ್ರೆ ಆರಂಭ

Rashmi Kasaragodu
Updated On : 18 Aug 2013, 1:25 am

ಮಂಗಳೂರು: ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಶ್ರೀ ಮಾತಾ ಅಮೃತಾನಂದಮಯಿಯವರ 60ನೇ ಸಂವತ್ಸರದ ಪ್ರಯುಕ್ತ ಆ.18 ರಂದು ಬೋಳೂರು ಅಮೃತ ವಿದ್ಯಾಲಯದಿಂದ ವಿಶೇಷ ರಥಯಾತ್ರೆ ನಡೆಯಲಿದೆ. ಅಮ್ಮನವರ ಜೀವನ ಸಂದೇಶ, ಸಾಮಾಜಿಕ, ಶೈಕ್ಷಣಿಕ ವೈದ್ಯಕೀಯ ಹಾಗೂ ಆಧ್ಯಾತ್ಮಿಕ ಸೇವೆಗಳ ಕುರಿತು ಪರಿಚಯಿಸುವ ಒಂದು ಗಂಟೆಯ ವಿಸಿಡಿ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ ಎಂದು ಮಠದ ಸಮಿತಿಯ ಅಧ್ಯಕ್ಷ ಡಾ. ಸನತ್ ಹೆಗ್ಡೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.  ಸಂಜೆ 5.30ಕ್ಕೆ ಪಣಂಬೂರು ಬೀಚ್‌ನಲ್ಲಿ ರಥಯಾತ್ರೆಯನ್ನು ಪಣಂಬೂರು ಬೀಚ್ ಸಿಇಒ ಯತೀಶ್ ಬೈಕಂಪಾಡಿ ಸ್ವಾಗತಿಸುವರು. ವಿಸಿಡಿ ಚಿತ್ರ ಪ್ರದರ್ಶನಕ್ಕೆ ಮಂಜುನಾಥ ರೇವಣಕರ್ ಚಾಲನೆ ನೀಡುವರು. ಶಾಸಕ ಮೈದಿನ್ ಬಾವ ಪಾಲ್ಗೊಳ್ಳುವರು. ಯಾತ್ರೆ ಸೆ.16ರವರೆಗೆ ಜಿಲ್ಲೆಯ ವಿವಿಧ ತಾಲೂಕು ಮತ್ತು ಉಡುಪಿ, ಉ.ಕ. ಜಿಲ್ಲೆಯಲ್ಲಿ ಸಂಚರಿಸಲಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement