ಇಂದು ಪ್ರತಿಭಟನಾ ಮೆರವಣಿಗೆ
ಮಂಗಳೂರು: ಕರಾವಳಿಯಲ್ಲಿ ಹೆಚ್ಚುತ್ತಿರುವ ಅಕ್ರಮ ಗೋಸಾಗಾಟ ಮತ್ತು ಕಳ್ಳತನ ವಿರುದ್ಧ ಪೊಲೀಸ್ ಇಲಾಖೆ ಮತ್ತು ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಜನಜಾಗೃತಿ ಸಮಿತಿ ವತಿಯಿಂದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 19 ರಂದು ಬೆಳಗ್ಗೆ 10ಕ್ಕೆ ಪ್ರತಿಭಟನೆ ಮೆರವಣಿಗೆ ಹಾಗೂ ತಾಲೂಕು ಕಚೇರಿ ಎದುರು ಸಾರ್ವಜನಿಕ ಸಭೆ ನಡೆಯಲಿದೆ. ಕರಾವಳಿ ನೆಲ, ಕೃಷಿ, ಪಶುಸಂಗೋಪನೆ, ಸಂಸ್ಕೃತಿ, ಪರಿಸರ ರಕ್ಷಿಸಿ, ಉಳಿಸಿ ಬೆಳೆಸುವ ಸಲುವಾಗಿ ಸಮಾನ ಮನಸ್ಕರೆಲ್ಲಾ ಒಟ್ಟು ಸೇರಿ ಜನ ಜಾಗೃತಿ ಸಮಿತಿ ರಚನೆಗೊಂಡಿದೆ ಎಂದು ಸಂಚಾಲಕ ಕಟೀಲು ದಿನೇಶ್ ಪೈ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಮಿತಿಯು ಪ್ರಾರಂಭಿಕ ಹೆಜ್ಜೆಯಾಗಿ ಗೋರಕ್ಷಣೆ ಕಡೆ ಗಮನ ಹರಿಸಿ ಗೋಮಾತೆ ರಕ್ಷಣೆ, ಸಾಕುವವರಿಗೆ ಬೆಂಬಲ ನೀಡಲು ಆಂದೋಲನ ಮತ್ತು ಹೋರಾಟ ನಡೆಸಲು ಉದ್ದೇಶಿಸಿದೆ ಎಂದರು. ಇತ್ತೀಚೆಗೆ ಕರಾವಳಿಯಲ್ಲಿ ಗೋಕಳ್ಳತನ, ಗೋಹತ್ಯೆ ಹಾಗೂ ಅಕ್ರಮದಿಂದ ಹಿಂಸಾತ್ಮಕವಾಗಿ ಗೋಸಾಗಾಟ ನಡೆಸುತ್ತಿರುವ ಪ್ರಕ್ರಿಯೆ ತೀವ್ರಗೊಂಡಿದ್ದು, ಇವುಗಳನ್ನು ತಡೆಯಲು ಪೊಲೀಸ್ ಇಲಾಖೆ ಮತ್ತು ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
'ಮಹಾಆನಂದ'
ವೆಬ್ಸೈಟ್ನಲ್ಲಿ
ಮಂಗಳೂರು: ಕೃಷಿ ಸಾಧಕ ಮಿಜಾರಗುತ್ತು ಆನಂದ ಆಳ್ವ ಅವರ ಜೀವನ ಚಿತ್ರಣ 'ಮಹಾ ಆನಂದ' ಪುಸ್ತಕದ ವೆಬ್ಸೈಟ್ ಢಿಢಿಢಿ.ಛಞಜ್ಞಛ್ಠ.ಛಿಟ್ಟ್ಜಡಠ್ಟಡಿ.್ಛ್ಟಟ ನ್ನು ಬುಧವಾರ ಪತ್ರಿಕಾ ಭವನದಲ್ಲಿ ಹಿರಿಯ ಪತ್ರಕರ್ತ ಧನಂಜಯ ಗುರುಪುರ ಅನಾವರಣಗೊಳಿಸಿದರು. ಮುದ್ರಿತ ಪುಸ್ತಕ ಇನ್ನಷ್ಟೆ ಬಿಡುಗಡೆಗೊಳ್ಳಬೇಕಿದ್ದು, ಹೊಸ ತಂತ್ರಜ್ಞಾನದ ಮೂಲಕ ಬಹುಬೇಗನೆ ಜನರ ಬಳಿ ತಲುಪಲು ಸಾಧ್ಯವಿದೆ ಎಂದು ಡೈಜಿವರ್ಲ್ಡ್ ಡಾಟ್ ಕಾಮ್ ಮುಖ್ಯಸ್ಥ ಮೆಲ್ವಿನ್ ರಾಡ್ರಿಗಸ್ ಹೇಳಿದರು. ಆನಂದ ಆಳ್ವರ 95ನೇ ಹುಟ್ಟುಹಬ್ಬದ ಪ್ರಯುಕ್ತ ಜೀವನ ಚರಿತ್ರೆಯ ಪುಸ್ತಕ ಕಾಣಿಕೆಯಾಗಿ ನೀಡಲಾಗುತ್ತಿದೆ ಎಂದು ಲೇಖಕ ಶೇಖರ ಅಜೆಕಾರು ಹೇಳಿದರು.