ಡಾ. ಕಯ್ಯಾರ ಕಿಂಞ್ಞಣ್ಣರೈ ಜನ್ಮಶತಮಾನೋತ್ಸವ-ಸಾಹಿತ್ಯೋತ್ಸವ ಸರಣಿ ಕಾರ್ಯಕ್ರಮಕ್ಕೆ ಸಿದ್ಧತೆ
ಕಾಸರಗೋಡು: ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳವಳಿಯ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗೌರವಿಸಲ್ಪಡುವ ನಾಡೋಜ ಡಾ. ಕಯ್ಯಾರ ಕಿಂಞ್ಞಣ್ಣ್ಣ ರೈ ಅವರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಪ್ರಯುಕ್ತ 100 ಕಾರ್ಯಕ್ರಮಗಳನ್ನು ಅಖಿಲ ಭಾರತ ಮಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಮತ್ತು ನಾಡೋಡ ಡಾ. ಕಯ್ಯಾರ ಕಿಜ್ಞಣ್ಣರೈ ಜನ್ಮಶತಮಾನೋತ್ಸವ ಸಮಿತಿಯ ನೇತೃತ್ವದಲ್ಲಿ ಬೇರೆ ಬೇರೆ ರಾಜ್ಯದಲ್ಲಿರುವ ಕನ್ನಡ, ತುಳು ವಿಭಾಗ, ಶಾಲಾ ಕಾಲೇಜುಗಳಲ್ಲಿ ಜನ್ಮಶತಮಾನೋತ್ಸವ- ಸಾಹಿತ್ಯೋತ್ಸವ ಸರಣಿ ಕಾರ್ಯಕ್ರಮಗಳು ಮತ್ತು ಗಲ್ಫ್ ರಾಷ್ಟ್ರ, ವಿದೇಶ ಹಾಗೂ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸಂಘಗಳು, ಕನ್ನಡ ಮತ್ತು ತುಳು ಸಂಘಟನೆಗಳು ಹಾಗೂ ಸರ್ಕಾರದ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು, ,ಕನ್ನಡ ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್ ಮುಂತಾದವುಗಳ ಆಶ್ರಯದಲ್ಲಿ ಕಯ್ಯಾರರ ಬಗ್ಗೆ ನಾನಾ ಕಾರ್ಯಕ್ರಮಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಶಿವರಾಮ ಕಾಸರಗೋಡು, ಅಧ್ಯಕ್ಷರು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಪಾರೆಕಟ್ಟೆ ರಸ್ತೆ, ಅಂಚೆ ರಾಮದಾಸನಗರ, ಕಾಸರಗೋಡು - 671 124, ಕೇರಳ ರಾಜ್ಯ, ಮೊಬೈಲ್ - 09448 572016, email:shivaramakasargod@gmail.com ಇವರನ್ನು ಸಂಪರ್ಕಿಸಬಹುದು.