ಯಶವಂತಪುರ-ಮಂಗಳೂರು ವೀಕ್ಲಿ ರೈಲು ಸೆ.2ರವರೆಗೆ ರದ್ದು
ಮಂಗಳೂರು: ಯಶವಂತಪುರ-ಮಂಗಳೂರು ಸೆಂಟ್ರಲ್ ಮಧ್ಯೆಯ ಸಾಪ್ತಾಹಿಕ ವಿಶೇಷ ರೈಲು ಸಂಚಾರವನ್ನು ಆ.18ರಿಂದ ಸೆ.2ರ ವರೆಗೆ ರದ್ದುಪಡಿಸಲಾಗಿದೆ ಎಂದು ನೈಋತ್ಯ ರೇಲ್ವೆ ಫಾಲ್ಘಾಟ್ ವಿಭಾಗದ ಪ್ರಕಟಣೆ ತಿಳಿಸಿದೆ. ಈ ರೈಲು ಸಂಚಾರ ಪ್ರಾರಂಭಿಸುವುದಾಗಿ ಹಿಂದೆ ಹೊರಡಿಸಿದ ಪ್ರಕಟಣೆಯನ್ನು ಕೊನೆಕ್ಷಣದಲ್ಲಿ ರದ್ದುಪಡಿಸಲಾಗಿತ್ತು. ಮಂಗಳೂರು-ಹಾಸನ ಮೂಲಕ ಬೆಂಗಳೂರಿಗೆ ತೆರಳುವ ಬದಲು ಈ ಮಾರ್ಗವನ್ನು ಕೇರಳ, ತಮಿಳ್ನಾಡು ಮೂಲಕ ನಿಗದಿಪಡಿಸಲಾಗಿತ್ತು.