ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಪವಾಸ ಸತ್ಯಾಗ್ರಹ ಬೆಂಬಲಿಸಿ 25ರಂದು ಪಾದಯಾತ್ರೆ

Lingaraj Badiger
Updated On : 23 Aug 2013, 12:49 pm

ಮಂಗಳೂರು: ಕಾರ್ಮಿಕರಿಗೆ ವಿವಿಧ ಸವಲತ್ತು ನೀಡಬೇಕು ಎಂಬ ಬೇಡಿಕೆ ಮುಂದಿರಿಸಿ ಅಖಿಲ ಭಾರತ ಕಾರ್ಮಿಕ ಸಂಘ ಮಂಗಳೂರಿನ ಕದ್ರಿ ಇಎಸ್ಐ ಆಸ್ಪತ್ರೆ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಬುಧವಾರ 3ನೇ ದಿನ ಪೂರೈಸಿದೆ. ಈ ಮಧ್ಯೆ ಸತ್ಯಾಗ್ರಹವನ್ನು ಇತರರೂ ಬೆಂಬಲಿಸುವ ಸಲುವಾಗಿ ಆ.25ರಂದು ಜಿಲ್ಲೆಯ ವಿವಿಧ ಕಡೆಗಳಿಂದ ಕಾರ್ಮಿಕರ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಗಂಜಿಮಠದಿಂದ ಬೆಳಗ್ಗೆ 8ಕ್ಕೆ, ಸುರತ್ಕಲ್, ಬಿ.ಸಿ.ರೋಡ್, ತೊಕ್ಕೊಟ್ಟುಗಳಿಂದ ಬೆಳಗ್ಗೆ 10ಕ್ಕೆ, ಅತ್ತಾವರದಿಂದ ಬೆಳಗ್ಗೆ 11ಕ್ಕೆ ಕಾರ್ಮಿಕರ ಪಾದಯಾತ್ರೆ ಹೊರಟು ಕದ್ರಿ ಶಿವಭಾಗ್ ಎದುರಿನ ಇಎಸ್ಐ ಆಸ್ಪತ್ರೆ ತಲುಪಲಿದೆ ಎಂದು ಪ್ರಧಾನ ಕಾರ್ಯದರ್ಶಿ ಸುದತ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement