ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಳೆ ಗಂಗೊಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘ ಚುನಾವಣೆ

Lingaraj Badiger
Updated On : 24 Aug 2013, 12:29 pm

ಗಂಗೊಳ್ಳಿ: ಸ್ಥಳೀಯ ಗಂಗೊಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2013-2014ರಿಂದ 2017-2018ರವರೆಗಿನ ಐದು ವರ್ಷಗಳ ಅವಧಿಗೆ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ 25ರಂದು ಗಂಗೊಳ್ಳಿಯ ಶ್ರೀ ರಾಮ ಮಂದಿರದಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ತುಂತುರು ಮಳೆ
ಉಡುಪಿ: ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಹನಿಹನಿಮಳೆಯಾಗುತ್ತಿದ್ದು ಬಿಸಿಲಿನ ತಾಪಮಾನವು ಜಾಸ್ತಿಯಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ ಮಧ್ಯಾಹ್ನದವರೆಗೆ ಬಿಸಿಲಿನ ವಾತವರಣವಿದ್ದು, ನಂತರಲ್ಲಿ ತುಂತುರು ಮಳೆಯಾಗಿದೆ. ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆವರೆಗೂ 11.46 ಮಿ.ಮಿ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 2.8 ಮಿ.ಮಿ., ಕುಂದಾಪುರ ತಾಲೂಕಿನಲ್ಲಿ  20.0 ಮಿ.ಮಿ., ಕಾರ್ಕಳ ತಾಲೂಕಿನಲ್ಲಿ 11.4 ಮಿ.ಮಿ. ಮಳೆಯಾಗಿದೆ.
ಇಂಟರ್ಯಾಕ್ಟ್ ಪದಗ್ರಹಣ
ಉಡುಪಿ: ಇಲ್ಲಿನ ಪಡುಬೆಳ್ಳೆಯ ಶ್ರೀನಾರಾಯಣ ಗುರು ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಪ್ರೌಢ ಶಾಲೆಗಳ ಇಂಟರ್ಯಾಕ್ಟ್ ಕ್ಲಬ್‌ಗಳ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ಶಿರ್ವ ರೋಟರಿ ಅಧ್ಯಕ್ಷ ಲಿಯೋ ನೊರೋನ್ನಾ ನೆರವೇರಿಸಿ ಪ್ರಮಾಣವಚನ ಬೋಧಿಸಿದರು. ಅತಿಥಿಗಳಾಗಿ ಶಾಲಾ ಸಮಿತಿ ಗೌರವ ಕಾರ್ಯದರ್ಶಿ ಶಿವಾಜಿ ಎಸ್. ಸುವರ್ಣ ಹಾಗೂ ರೋಟರಿ ವೃತ್ತಿಸೇವಾ ನಿದೇಶಕ ವಿಲಿಯಮ್ ಮಚಾದೊ ಭಾಗವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ಜಿನರಾಜ್ ಜಿ. ಸಾಲ್ಯಾನ್, ಮುಖ್ಯ ಶಿಕ್ಷಕಿ ಉಷಾ ಕುಮಾರಿ, ಇಂಟರ್ಯಾಕ್ಟ್ ಶಿಕ್ಷಕ ಸುರೇಶ ನಾಯ್ಕ್, ಶಿಕ್ಷಕಿ ಸಂಗೀತಾ ಸಿ. ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement