ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಏಪ್ರಿಲ್‌ನಲ್ಲಿ ಕಟೀಲು ಚಿನ್ನದ ರಥ ಸಮರ್ಪಣೆ: ರಮಾನಾಥ ರೈ

Mainashree
Updated On : 26 Aug 2013, 10:32 am

ಮೂಲ್ಕಿ: ಮುಂದಿನ ಏಪ್ರಿಲ್‌ನಲ್ಲಿ ಜರುಗಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ರಥೋತ್ಸವದ ಸಂದರ್ಭದಲ್ಲಿ ನೂತನ ಚಿನ್ನದ ರಥದ ಸಮರ್ಪಣೆ ನಡೆಯಲಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಕಟೀಲು ದೇವಳದಲ್ಲಿ ಭಾನುವಾರ, ಜರುಗಿದ ಕಾರ್ಯಕ್ರಮದಲ್ಲಿ, ರಾಜ್ಯದ ಅತೀ ಎತ್ತರದ ಚಿನ್ನದ ರಥದ ಸ್ವರ್ಣ ಮುಹೂರ್ತ ನೆರವೇರಿಸಿ ಅವರು ಮಾತನಾಡಿದರು.
ನೂತನ ಚಿನ್ನದ ರಥಕ್ಕೆ 12 ಕೆ.ಜಿ. ಚಿನ್ನ ಹಾಗೂ 200 ಕೆ.ಜಿ. ಬೆಳ್ಳಿ ಬಳಕೆಯಾಗಲಿದ್ದು ರಥವು ಈಗಾಗಲೇ ತಯರಾಗಿದೆ. ಎನ್‌ಐಟಿಕೆಯ ತಜ್ಞರಿಂದ ಚಿನ್ನದ ಗುಣಮಟ್ಟದ ಪರೀಕ್ಷೆ ನಡೆಯಲಿದ್ದು, ಚಿನ್ನದ ಲೇಪನಕ್ಕೆ ಉಡುಪಿಯ ಸ್ವರ್ಣ ಜುವೆಲ್ಲರ್ಸ್‌ನ ಗುಜ್ಜಾಡಿ ರಾಮದಾಸ್ ನಾಯಕ್‌ಗೆ ಸಾಂಕೇತಿಕವಾಗಿ ಚಿನ್ನ ಹಸ್ತಾಂತರಿಸುವ ಮೂಲಕ ರಮಾನಾಥ ರೈ ಸ್ವರ್ಣ ರಥದ ಯೋಜನೆಗೆ ಚಾಲನೆ ನೀಡಿದರು.
ಮೂಲಕುದ್ರು ಅಭಿವೃದ್ಧಿ: ಕಟೀಲು ದೇವಳದ ಮೂಲಕುದ್ರು ರು. 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ. ಕೆರೆ, ತೀರ್ಥಬಾವಿ ಮುಂತಾದ ಕಾಮಗಾರಿಯನ್ನು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿ, ಕಟೀಲು ಪರಿಸರವನ್ನು ಗ್ರೇಟರ್ ಮಂಗಳೂರಿಗೆ ಸೇರಿಸಿದಲ್ಲಿ ಹೆಚ್ಚಿನ ಅಭಿವೃದ್ಧಿ ಆಗಲಿದೆ. ಈ ಬಗ್ಗೆ ಸಮಾಲೋಚಿಸುವಂತೆ ಶಾಸಕರಿಗೆ ತಿಳಿಸಿದರು.
ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ವಹಿಸಿದ್ದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಶಾಸಕ ಮೊಯ್ದೀನ್ ಬಾವಾ, ಉದ್ಯಮಿ ದಯಾನಂದ ರೆಡ್ಡಿ ಬೆಂಗಳೂರು, ಐಕಳ ಹರೀಶ್ ಶೆಟ್ಟಿ, ಸತೀಶ್ ಶೆಟ್ಟಿ, ಮುಂಬೈನ ಸಂಜೀವಿನಿ ಟ್ರಸ್ಟ್‌ನ ಸಂಜೀವ ರಾವ್, ಧಾರ್ಮಿಕ ಇಲಾಖೆ ಆಯುಕ್ತ ನಂದಕುಮಾರ್, ಕಟೀಲು ದೇವಳದ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ,ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ವಾಸ್ತು ತಜ್ಞ ಸುಬ್ರಹ್ಮಣ್ಯ ಅವಧಾನಿ, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement