ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಗರಹೊಳೆಯಲ್ಲಿ ಆನೆಗಳಿಗೆ ಸಂರಕ್ಷಿತ ಅವಾಸ: ಸಚಿವ ರೈ

Lingaraj Badiger
Updated On : 27 Aug 2013, 12:07 pm

ಮಂಗಳೂರು: ಆನೆಗಳಿಂದ ಜನರಿಗೆ ತೊಂದರೆ ತಪ್ಪಿಸಲು ಮತ್ತು ಆನೆಗಳ ಸಂರಕ್ಷಣೆಗೆ ನಾಗರಹೊಳೆ ರಕ್ಷಿತಾರಣ್ಯದಲ್ಲಿ ಅವಾಸ ಸ್ಥಾನ ಮಾಡಲಾಗುವುದು ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಹೇಳಿದರು.
 ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಸಚಿವ ರೈ, ನಾಗರಹೊಳೆ ಪ್ರದೇಶದಲ್ಲಿ ಈಗಾಗಲೆ 30 ಕಿ.ಮೀ. ಉದ್ದಕ್ಕೆ ಕಂದಕ ತೋಡಲಾಗಿದೆ. ಇನ್ನು 41 ಕಿ.ಮೀ. ಕಂದಕ ತೋಡಬೇಕಾಗಿದೆ. ಎಲ್ಲ ಆನೆಗಳನ್ನು ಒಂದೆಡೆ ಸೇರಿಸಿ ಸಂರಕ್ಷಿಸಲಾಗುವುದು. ಇದರಿಂದ ಜನರಿಗೆ ಆನೆ ಹಾವಳಿ ತಪ್ಪಲಿದೆ. ಆನೆಗಳಿಗೂ ರಕ್ಷಣೆ ಸಿಗಲಿದೆ ಎಂದರು. ಆನೆಗಳು ಸಂಚರಿಸುವ ಪಥ ಬದಲಾಗಿದೆ. ಆನೆ ಪಥ ಪ್ರದೇಶದಲ್ಲಿರುವ ರೈತರು ಸ್ವಯಂ ಪ್ರೇರಿತರಾಗಿ ಜಾಗ ಬಿಟ್ಟುಕೊಟ್ಟರೆ ಅವರಿಗೆ ಪರಿಹಾರ ನೀಡಲಾಗುವುದು. ಆನೆ ಕಾರಿಡಾರ್ ಯೋಜನೆ 13 ಸಾವಿರ ಕೋಟಿ. ಕಾಲ ಕ್ರಮೇಣ ಜಾರಿಗೆ ಬರಲಿದೆ ಎಂದರು. ಅಡಕೆ ಕೊಳೆ ರೋಗದಿಂದ ಸಂಕಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. 4 ಸಚಿವರು ಈ ಬಗ್ಗೆ ದನಿ ಎತ್ತಿದ್ದೇವೆ ಎಂದರು.

---
ಆಳ್ವಾಸ್ ಯಕ್ಷಸಿರಿ ಸ್ಪರ್ಧೆಗೆ ಆಹ್ವಾನ
ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಡಿಸೆಂಬರ್‌ನಲ್ಲಿ ನಡೆಯಲಿರುವ ಆಳ್ವಾಸ್ ವಿಶ್ವ ನುಡಿಸಿರಿ-ವಿರಾಸತ್ ಅಂಗವಾಗಿ ನವೆಂಬರ್‌ನಲ್ಲಿ ವಿದ್ಯಾರ್ಥಿಗಳಿಗೆ ತೆಂಕು ಮತ್ತು ಬಡಗು ತಿಟ್ಟುಗಳ ಯಕ್ಷಗಾನ ಸ್ಪರ್ಧೆ ಏರ್ಪಡಿಸಲಾಗಿದೆ.
ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಆಯೋಜಿಸುವ ಈ ಸ್ಪರ್ಧೆಯಲ್ಲಿ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಪದವಿಪೂರ್ವ, ಪದವಿ, ಸ್ನಾತಕೋತ್ತರ ಕಾಲೇಜುಗಳ ಯಕ್ಷಗಾನ ತಂಡಗಳು ಭಾಗವಹಿಸಬಹುದಾಗಿದೆ. ಸ್ಪರ್ಧೆ ತೆಂಕುತಿಟ್ಟು ಮತ್ತು ಬಡಗುತಿಟ್ಟು ಈ ಎರಡು ಪ್ರಕಾರಗಳಲ್ಲಿ ಪ್ರತ್ಯೇಕವಾಗಿ ನಡೆಯಲಿದೆ. ಪ್ರಥಮ ಬಹುಮಾನ ರು. 20,000, ದ್ವಿತೀಯ ರು. 15,000, ತೃತೀಯ ರು. 10,000 ಹಾಗೂ ವೈಯಕ್ತಿಕ ಬಹುಮಾನ ರು. 2000. ಭಾಗವಹಿಸಿದ ಪ್ರತಿ ತಂಡಕ್ಕೆ ರು. 7000 ಸಂಭಾವನೆ ನೀಡಲಾಗುತ್ತದೆ.  ಆಸಕ್ತ ತಂಡಗಳು ಸೆ.3ರೊಳಗೆ ಪ್ರವೇಶ ಪತ್ರವನ್ನು: ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ (ರಿ.) ಕಳುಹಿಸುವಂತೆ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9480529236, 9448719963, 8884133272.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement