ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೃಷ್ಣಾಷ್ಟಮಿ ಆಚರಣೆಗೆ ತುಂತುರು ಮಳೆ

Mainashree
Updated On : 29 Aug 2013, 10:29 am

ಮಂಗಳೂರು: ಎರಡು ದಿನಗಳಿಂದ ಬಿಡುವಾಗಿದ್ದ ಮಳೆ ಜಿಲ್ಲೆಯಲ್ಲಿ ಬುಧವಾರ ಕಾಣಿಸಿದೆ. ಹಗಲು ಹೊತ್ತು ಬಿಸಿಲು ಕಂಡುಬಂದರೂ ಮಧ್ಯಾಹ್ನ ಮಳೆ ಹನಿದು ಹೋಗಿದೆ. ಸಂಜೆ ಮತ್ತೆ ಮಳೆ ಬಂದಿದ್ದು, ಆಗಾಗ ತುಂತುರು ಮಳೆ ಸುರಿದಿದೆ. ಎಲ್ಲೆಡೆ ಕೃಷ್ಣಾಷ್ಟಮಿ ಆಚರಣೆಗೆ ಮಳೆಯ ಸಿಂಚನವಾದ ಬಗ್ಗೆ ವರದಿಯಾಗಿದೆ. ಬುಧವಾರ ಬೆಳಗ್ಗಿನ ವರೆಗೆ ಬಂಟ್ವಾಳ 0.8 ಮಿ.ಮೀ, ಮಂಗಳೂರು 2.5 ಮಿ.ಮೀ, ಸುಳ್ಯ 1.0 ಮಿ.ಮೀ ಮಳೆ ದಾಖಲಾಗಿದೆ. ಉಳಿದಂತೆ ಬೆಳ್ತಂಗಡಿ, ಪುತ್ತೂರುಗಳಲ್ಲಿ ಮಳೆ ವರದಿಯಾಗಿಲ್ಲ. ಒಟ್ಟು 0.9 ಮಿ.ಮೀ. ಮಳೆ ದಾಖಲಾಗಿದೆ. ಇದುವರೆಗೆ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಒಟ್ಟು 651.7 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 856.4 ಮಿ.ಮೀ ಮಳೆಯಾಗಿತ್ತು. ಇದುವರೆಗೆ ಒಟ್ಟು 3471.4 ಮಿ.ಮೀ., ಕಳೆದ ವರ್ಷ 2454.4 ಮಿ.ಮೀ. ಮಳೆ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement