ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎದೆ ನೋವಿಂದ ವ್ಯಕ್ತಿ ಸಾವು

Mainashree
Updated On : 30 Aug 2013, 10:16 am

ಕಾಪು: ಎದೆ ನೋವಿನಿಂದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇಲ್ಲಿನ ಶಂಕರಪುರದ ಮೂಡಬೆಟ್ಟು ಗ್ರಾಮದ ಕಾಫಿಕಾಡು ಎಂಬಲ್ಲಿ ಗುರುವಾರ ನಡೆದಿದೆ. ಮೃತರು ಸುಕುಮಾರ ಕರ್ಕಡ (45). ಇವರು ಸ್ವಂತ ಆಟೋ ರಿಕ್ಷಾ ಇಟ್ಟುಕೊಂಡು ದುಡಿಯುತ್ತಿದ್ದು. ಬುಧವಾರ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದು ಊಟ ಮಾಡಿ ಮಲಗಿದ್ದರು. ಗುರುವಾರ ಮುಂಜಾನೆ ಸುಕುಮಾರ ಕರ್ಕಡ ಅವರಿಗೆ ಎದೆನೋವು ಬಂದು ತಕ್ಷಣ ಅವರನ್ನು ಮನೆಯವರು ಉಡುಪಿಯ ಟಿ.ಎಂ.ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.  ಸುಕುಮಾರ ಕರ್ಕಡ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ಮೃತರ ಸಹೋದರ ಪ್ರವೀಣ್ ಕುಮಾರ್ ಕರ್ಕಡ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement