ಜೀವ ಬೆದರಿಕೆ: ಮಲಬಾರಿ ವಿರುದ್ಧ ಕೇಸ್ ದಾಖಲು
ಮಂಗಳೂರು: ಶಿಕ್ಷೆಗೆ ಕಾರಣನಾದ ಪೊಲೀಸ್ ಅಧಿಕಾರಿ ವಿರುದ್ಧ ಪ್ರತಿಕಾರ ಮಾಡುವುದಾಗಿ ಮಾಧ್ಯಮಗಳ ಮುಂದೆ ಗುಡುಗಿದ ಪಾತಕಿ ರಶೀದ್ ಮಲಬಾರಿ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವಬೆದರಿಕೆ ನೀಡಿದ ಬಗ್ಗೆ ಸಿಸಿಬಿ ಇನ್‌ಸ್ಪೆಕ್ಟರ್ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ದೂರು ನೀಡಿದ್ದಾರೆ. 'ಇನ್‌ಸ್ಪೆಕ್ಟರ್ ಪ್ರಸನ್ನ, ಆರ್‌ಎಸ್‌ಎಸ್ ಮೋಹನ್ ಭಾಗವತ್, ಕಲ್ಲಡ್ಕ ಪ್ರಭಾಕರ ಭಟ್ಟರ ಮಗ. ಇದೆಲ್ಲಾ ಮಾಡಿಸಿದ್ದು ಅವನೇ, ಇಲ್ಲಿನ ಕೋರ್ಟ್‌ಗಳಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಪ್ರಭಾವ ನಡೆಯುತ್ತದೆ. ಹೊರಗೆ ಬಂದಮೇಲೆ ಇನ್‌ಸ್ಪೆಕ್ಟರ್‌ನನ್ನು ನೋಡಿಕೊಳ್ಳುತ್ತೇನೆ' ಎಂದು ಬೆದರಿಕೆ ಹಾಕಿದ್ದ.
ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ವೀಡಿಯೋ ಕ್ಲಿಪ್ಪಿಂಗ್ ಆಧರಿಸಿ ಬಂದರು ಠಾಣೆಯಲ್ಲಿ ದೂರು ನೀಡಿದ್ದಾರೆ.