ದೈವಸ್ಥಾನದಿಂದ ಲಕ್ಷಾಂತರ ರುಪಾಯಿ ಕಳವು
ಮಲ್ಪೆ: ಇಲ್ಲಿನ ಕೊಡವೂರು ಗ್ರಾಮದ ಕಲ್ಮಾಡಿ ಬಬ್ಬರ್ಯ ದೈವಸ್ಥಾನದಲ್ಲಿ ಲಕ್ಷಾಂತರ ರುಪಾಯಿ ಹಣವನ್ನು ಕಳವು ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.ದೈವಸ್ಥಾನದ ಅರ್ಚಕ ಗಣೇಶ್ ಮಧ್ಯಸ್ಥ ಅವರು ಬುಧವಾರ ರಾತ್ರಿ 7 ಗಂಟೆಗೆ ದೈವಸ್ಥಾನದ ಪೂಜೆ ಮುಗಿಸಿ, ಬೀಗ ಹಾಕಿ ಮನೆಗೆ ಹೋಗಿದ್ದು, ಗುರುವಾರ ಬೆಳಗ್ಗೆ 5 ಗಂಟೆಗೆ ಲಕ್ಷ್ಮೀಶ ಕಾಂಚನ್ ಅವರು ದೈವಕ್ಕೆ ನಮಸ್ಕಾರ ಮಾಡುತ್ತಿರುವಾಗ ಗರ್ಭಗುಡಿಯ ಬೀಗ ಒಡೆದಿರುವುದು ಕಂಡುಬಂತು. ಅವರು ಮನೆಗೆ ಬಂದು ಕರಿಯಪ್ಪ ಕಾಂಚನ್ ಅವರಿಗೆ ತಿಳಿಸಿದ್ದು, ಕರಿಯಪ್ಪ ಅವರು ಹೋಗಿ ಪರಿಶೀಲಿಸಿದಾಗ ಕಳ್ಳರು ರಾತ್ರಿ ಬಾಗಿಲಿನ ಬೀಗ ಒಡೆದು 2 ಕಾಣಿಕೆ ಡಬ್ಬಿಯಲ್ಲಿ ಸಂಗ್ರಹವಾಗಿದ್ದ ಅಂದಾಜು ರು. 1.25 ಲಕ್ಷ ಕಳವು ಮಾಡಿದ್ದಾರೆ. ಈ ಬಗ್ಗೆ ಕರಿಯಪ್ಪ ಅವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.