ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಿಡ್ಡೋಡಿ, ಎತ್ತಿನಹೊಳೆ ಯೋಜನೆ ಬಗ್ಗೆ ಜನರಿಗೆ ಶಿಕ್ಷಣ ಅಗತ್ಯ: ಹೊಳ್ಳ

Mainashree
Updated On : 31 Aug 2013, 10:14 am

ಬೆಳ್ತಂಗಡಿ: ಸಚಿವ ರಮಾನಾಥ ರೈ ಹೊರತು ಪಡಿಸಿ ಜಿಲ್ಲೆಯ ಎಲ್ಲಾ ಮಂತ್ರಿಗಳು, ಸಂಸದರು, ಶಾಸಕರು ನಿಡ್ಡೋಡಿ ಹಾಗೂ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಈ ಯೋಜನೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದು ಪರಿಸರ ಪ್ರೇಮಿ ದಿನೇಶ್ ಹೊಳ್ಳ ಹೇಳಿದರು.
ದ.ಕ. ವನ್ಯ ಚಾರಣ ಬಳಗ, ಕರಾವಳಿ ಯುವ ಸಿಂಚನ, ಮಂಗಳೂರು ಸಿಟಿ ರೋಟರ್ಯಾಕ್ಟ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸೇರಿರುವ ಮಂಗಳೂರಿನ ಪರಿಸರ ಪ್ರೇಮಿಗಳ ಒಕ್ಕೂಟ ಬೆಳ್ತಂಗಡಿ ವಾರ್ತಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎತ್ತಿನ ಹೊಳೆ ಯೋಜನೆಯನ್ನು ತಡೆಯುವ ಬಗ್ಗೆ ಮಾಹಿತಿ ನೀಡಿದರು.
ಎತ್ತಿನ ಹೊಳೆ ಯೋಜನೆ ಕಾರ್ಯಗತವಾದರೆ ದ.ಕ. ಜಿಲ್ಲೆಗೆ ನೀರಿಲ್ಲದೆ ಶಾಶ್ವತ ಬರಗಾಲ ಬರಲಿದೆ. ಈಗಾಗಲೇ ನೇತ್ರಾವತಿಗೆ ಅಲ್ಲಲ್ಲಿ ಕಟ್ಟಿದ ಅಣೆಕಟ್ಟುಗಳಿಂದ ನೀರಿನ ಹರಿವು ಕಡಿಮೆಯಾಗಿ ಸಮುದ್ರದಲ್ಲಿ ಮೀನುಗಳ ಕೊರತೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಒಂದು ವಿಧಾನ ಸೌಧ ಬಿದ್ದರೆ ಅಂತಹ ಒಂದಲ್ಲ, ಹತ್ತಲ್ಲ, ನೂರು ವಿಧಾನ ಸೌಧ ಕಟ್ಟಬಹುದು. ಆದರೆ, ಒಂದು ನದಿ ಅಳಿದು ಹೋದರೆ ಮತ್ತೆ ಅಂತಹ ನದಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಕರಾವಳಿಯ ಜೀವನದಿ ನೇತ್ರಾವತಿಯನ್ನು ನಮ್ಮ ಕಣ್ಣೆದುರೇ ಮಾರಕಾಸ್ತ್ರ ಹಿಡಿದು ಹತ್ಯ ಮಾಡಲು ಸಿದ್ಧರಾದಾಗ ನಾವು ಕೈಕಟ್ಟಿ, ಬಾಯಿ ಮುಚ್ಚಿ ಸುಮ್ಮನಿರುವುದು ಸರಿಯಲ್ಲ ಎಂದು ಹೇಳಿದರು.
ಈ ಬಗ್ಗೆ ಕಾಲೇಜು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಬೇಕಾಗಿದೆ. ಗಾಳಿ ಪಟ ಹಾರಾಟ ಕಾರ್ಯಕ್ರಮ, ಯಕ್ಷಗಾನ, ಅಂಚೆ ಕಾರ್ಡ್, ಆಟಿಕಳಂಜ ಮೂಲಕ ಯೋಜನೆಯ ಮಾರಕತೆಯನ್ನು ಬಿಂಬಿಸಲಾಗುವುದು ಎಂದರು.
ದಿನೇಶ್ ಕೊಡಿಯಾಲ್‌ಬೈಲ್, ಹರೀಶ್ ಅಡ್ಯಾರ್, ಪವನ್ ಜೈನ್, ಸತೀಶ್ ಇದ್ದರು. ಕುತ್ತಾರು ತಿಮ್ಮಕ್ಕ ಬಳಗ ಆಟಿ ಕಳೆಂಜ ವೇಷ ಇತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement