ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಟೀಲು ಅವ್ಯವಹಾರ ತನಿಖೆ ಯಾಕಿಲ್ಲ?

Vishwanath S
Updated On : 2 Dec 2013, 12:12 pm

ಮಂಗಳೂರು: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸರಬರಾಜಾಗುವ ಸಾಮಗ್ರಿಗಳಿಗೆ ಸಂಬಂಧಿಸಿ ಅವ್ಯವಹಾರದ ಬಗ್ಗೆ ಆಸ್ರಣ್ಣರು ದೂರು ನೀಡಿದ್ದರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾಕೆ ತನಿಖೆ ನಡೆಸಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸುದತ್ ಜೈನ್ ಪ್ರಶ್ನಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬ್ರಹ್ಮಕಲಶೋತ್ಸವ ಸಂದರ್ಭ ಬ್ಯಾನರ್‌ಗಳಲ್ಲಿ ಅವ್ಯವಹಾರ ನಡೆದಿರುವ ಗುಮಾನಿ ಇದೆ. ಮೊನ್ನೆ 6ನೇ ಮೇಳ ಉದ್ಘಾಟನೆಗೆ ಬಳಸಿದ ಬ್ಯಾನರ್‌ಗೂ ಬ್ರಹ್ಮಕಲಶೋತ್ಸವದ ಬ್ಯಾನರ್‌ಗೂ ವ್ಯತ್ಯಾಸವಿದೆ. ಅಲ್ಲದೆ ಕಟೀಲು ದೇಗುಲದ ಮೂಲ ಸ್ಥಳ ಕುದ್ರು ಅಭಿವೃದ್ಧಿಗೆ ಭ್ರಾಮರೀ ವನ ನಿರ್ಮಾಣ ಸಮಿತಿ ಹುಟ್ಟು ಹಾಕಿರುವುದು ಸಂದೇಹಕ್ಕೆ ಕಾರಣವಾಗಿದೆ. ಇದರಲ್ಲಿ ಜನಪ್ರತಿನಿಧಿಗಳನ್ನು ಸೇರಿಸಿದ್ದು, ಭಕ್ತರಿಗೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮುಖಂಡರಾದ ಗೋಕುಲ್, ಪದ್ಮನಾಭ ಶೆಟ್ಟಿ, ಜಯಮ್ಮ, ದಿನೇಶ್ ಆಂಚನ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement