ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಿಳಿನೆಲೆ ಭೂಮಿ ಮಂಜೂರಾತಿ ಕಾನೂನು ಬಾಹಿರ: ಆರೋಪ

Vishwanath S
Updated On : 2 Dec 2013, 12:11 pm

ಸುಬ್ರಹ್ಮಣ್ಯ: ಪುತ್ತೂರು ತಾಲೂಕಿನ ಬಿಳಿನೆಲೆ ಗ್ರಾ.ಪಂ. ವ್ಯಾಪ್ತಿಗೊಳಪಟ್ಟ ಕೈಕಂಬ ಪಳ್ಳಿಗದ್ದೆಯಲ್ಲಿರುವ ಸರ್ಕಾರಿ ಜಮೀನನ್ನು ಪಂಚಾಯಿತಿಗೆ ಮಂಜೂರಾತಿಗೆ ಸಲ್ಲಿಸುವಂತೆ ನೀಡಿದ ಮನವಿಯನ್ನು ಕಡೆಗಣಿಸಿ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ದೇವಳದ ಗೋಶಾಲೆಗೆ ಮಂಜೂರಾತಿ ಮಾಡಿರುವುದು ಕಾನೂನು ಬಾಹಿರ. ಇದನ್ನು ವಿರೋಧಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾ.ಪಂ ಅಧ್ಯಕ್ಷೆ ಶಾರದಾ ದಿನೇಶ್ ಗೌಡ ಮತ್ತು ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸುಧೀರ್ ಕುಮಾರ್ ರೈ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಳಿನೆಲೆ ಗ್ರಾಮದ ಕೈಕಂಬ ಪಳ್ಳಿಗದ್ದೆ ಎಂಬಲ್ಲಿರುವ ಸರ್ವೆ ನಂಬ್ರ 134/1ಪಿ1ರಲ್ಲಿ 5.52 ಎಕ್ರೆ ಹಾಗೂ ಸರ್ವೆ ನಂಬ್ರ 135ರಲ್ಲಿ 2.09 ಎಕ್ರೆ ಸೇರಿದಂತೆ ಒಟ್ಟು 7.61ಎಕ್ರೆ ಗೋಮಾಳ ಸ್ಥಳವನ್ನು ಪಂಚಾಯಿತಿ ಹೆಸರಿಗೆ ಕಾದಿರಿಸುವಂತೆ ಗ್ರಾಮಸ್ಥರ ಮನವಿ ಮೇರೆಗೆ ಗ್ರಾಮ ಸಭೆಯಲ್ಲಿ (6.7.13) ನಿರ್ಣಯ ಕೈಗೊಳ್ಳಲಾಗಿತ್ತು. ತಹಸೀಲ್ದಾರ್ ಕ್ರಮ ಕೈಗೊಳ್ಳುವಂತೆ ನಿರ್ಣಯದ ಪ್ರತಿ ಲಗತ್ತೀಕರಿಸಿದ್ದು, ಬೇರೆ ಇಲಾಖೆಗೆ ನೀಡದಂತೆ ಆಕ್ಷೇಪ ಸಲ್ಲಿಸಲಾಗಿತ್ತು. ಇದೀಗ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ದೇವಸ್ಥಾನದ ಗೋಶಾಲೆಗೆ ಭೂಮಿ ಮಂಜೂರಾತಿ ಮಾಡುವಾಗ ಪಂಚಾಯಿತಿ ಆಕ್ಷೇಪ ಕಡೆಗಣಿಸಿರುವುದು ಕಾನೂನು ಬಾಹಿರ. ಸುಳ್ಯ, ಸುಬ್ರಹ್ಮಣ್ಯ ಪರಿಸರದಲ್ಲಿ 47 ಎಕ್ರೆ ಗೋಮಾಳ ಇರುವಾಗ ಬಿಳಿನೆಲೆ ಗ್ರಾಮದ ಜಾಗ ನೀಡಿರುವುದು ಖಂಡನೀಯ. ಇದರ ವಿರುದ್ಧ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು. ಜಿ.ಪಂ. ಸದಸ್ಯೆ ಕುಮಾರಿ ವಾಸುದೇವನ್, ಗ್ರಾ.ಪಂ ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ಮನೋಜ್ ಕುಮಾರ್, ಗಿರಿಜಾ ಕೈಕಂಬ, ನಾಗವೇಣಿ, ಕುಶಾಲಪ್ಪ ಗೌಡ ಕೈಕಂಬ, ಜಮೀಲಾ ನೆಟ್ಟಣ, ಅಲೆಕ್ಸಾಂಡರ್ ನೆಟ್ಟಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement