ಮೀನುಗಾರರ ಅಭಿವೃದ್ಧಿ: ಪ್ರಧಾನಿಗೆ ಎನ್ಎಫ್ ಎಫ್ನಿಂದ ಮನವಿ
ಮಂಗಳೂರು: 13 ರಾಜ್ಯಗಳ ಕರಾವಳಿ ಪ್ರದೇಶದ ಸುಮಾರು 2 ಕೋಟಿ ಮೀನುಗಾರರು ಹಾಗೂ 1 ಕೋಟಿ ಒಳನಾಡು ಮೀನುಗಾರರ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ನ್ಯಾಶನಲ್ ಫಿಶ್ ವರ್ಕಸ್ ಫೋರಂ(ಎನ್ಎಫ್ಎಫ್) ಪದಾಧಿಕಾರಿಗಳು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದೆ.
ಬೇಡಿಕೆಗಳು: ಆಳ ಸಮುದ್ರ ಮೀನುಗಾರಿಕೆಗೆ ಶೇ. 50 ಸಬ್ಸಿಡಿ ಮತ್ತು ಶೇ. 50 ಸಾಲ, ಶೇ. 4 ಬಡ್ಡಿದರದಲ್ಲಿ ಒದಗಿಸಬೇಕು. ಮಂಡಲ್ ಆಯೋಗ ಶಿಫಾರಸ್ಸು ಮಾಡಿರುವ ಮೇರೆಗೆ ಮೀನುಗಾರ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಹಾಗೂ ಮೀನುಗಾರರು ವಾಸಿಸುವ ಕ್ಷೇತ್ರವನ್ನು ಖಾದಿಷ್ಟ ಕ್ಷೇತ್ರವಾಗಿ ಒದಗಿಸಬೇಕು. ಯಾಂತ್ರಿಕ ದೋಣಿ ಉಪಯೋಗಿಸುವ ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಮತ್ತು ನಾಡದೋಣಿ ಉಪಯೋಗಿಸುವ ಸೀಮೆಎಣ್ಣೆ ಮೇಲಿನ ತೆರಿಗೆ ರದ್ದುಗೊಳಿಸಬೇಕು. ಪ್ರಕೃತಿ ವಿಕೋಪ ಸಂದರ್ಭ ಮೀನುಗಾರರ ಸಾಲಮನ್ನಾ ಮಾಡಬೇಕು. ಮುಂದಿನ ಬಜೆಟ್ನಲ್ಲಿ ಮೀನುಗಾರರ ಅಭಿವೃದ್ಧಿಗೆ ಹೆಚ್ಚಿನ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಬೇಕು.
ನಿಯೋಗದಲ್ಲಿ ಅಧ್ಯಕ್ಷರಾದ ರಾಮ್ಭಾವ್ ಪಟೀಲ್, ಮಾಜಿ ಅಧ್ಯಕ್ಷ ತೋಮಸ್ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಎಂ. ಅಲಿಂಗೊ, ಕಾರ್ಯದರ್ಶಿಗಳಾದ ವಾಸುದೇವ ಬೋಳೂರು, ಟಿ. ಪೀಟರ್, ಪ್ರದೀಪ್ ಚಟರ್ಜಿ ಇದ್ದರು ಎಂದು ಪ್ರಕಟಣೆ ತಿಳಿಸಿದೆ.