ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಾಜ್ಯ ಪವರ್‌ಲಿಫ್ಟಿಂಗ್ ಸ್ಪರ್ಧೆ: ಭದ್ರಾವತಿಯ ಸಲೀಮ್, ಮಂಗಳೂರಿನ ಅಮಿತಾಗೆ ಪ್ರಶಸ್ತಿ

Vishwanath S
Updated On : 2 Dec 2013, 12:11 pm

ಮೂಲ್ಕಿ: ಕಿನ್ನಿಗೋಳಿಯ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಆಶ್ರಯದಲ್ಲಿ ಕರ್ನಾಟಕ ಪವರ್ ಲಿಫ್ಟಿಂಗ್ ಎಸೋಸಿಯೇಶನ್ ಸಹಯೋಗದೊಂದಿಗೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರುಗಿದ ರಾಜ್ಯ ಜ್ಯೂನಿಯರ್, ಸಬ್‌ಜ್ಯೂನಿಯರ್ ಮತ್ತು ಮಾಸ್ಟರ್ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭದ್ರಾವತಿಯ ಕಾರಂತ ಜಿಮ್‌ನ ಸಲೀಮ್ ಎಂ. 'ಜ್ಯೂನಿಯರ್ ಬಲಾಢ್ಯ ಪುರುಷ ಕರ್ನಾಟಕ-2013' ಪ್ರಶಸ್ತಿ ಗಳಿಸಿದ್ದಾರೆ.
ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನ ಅಮಿತಾ 'ಜ್ಯೂನಿಯರ್ ಬಲಾಢ್ಯ ಮಹಿಳೆ ಕರ್ನಾಟಕ-2013' ಆಗಿ ಮೂಡಿ ಬಂದಿದ್ದಾರೆ.
ಪುರುಷರ ಸಮಗ್ರ ಪ್ರಶಸ್ತಿಯನ್ನು ಮಂಗಳೂರಿನ ಬಾಲಂಜನೇಯ ಜಿಮ್, ರನ್ನರ್ಸ್ ಅಪ್ ವೀರ ಮಾರುತಿ ಸಾಲಿಗ್ರಾಮ, ಮಹಿಳೆಯರ ಸಮಗ್ರ ಪ್ರಶಸ್ತಿಯನ್ನು ಮೂಡುಬಿದಿರೆಯ ಆಳ್ವಾಸ್ ಹಾಗೂ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಎಸ್‌ಡಿಎಂ ಉಜಿರೆ ಸ್ಪೋರ್ಟ್ಸ್ ಕ್ಲಬ್ ಪಡೆದುಕೊಂಡಿದೆ.
ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಪವರ್ ಲಿಫ್ಟಿಂಗ್ ಎಸೋಸಿಯೇಶನ್ ಮಂಗಳೂರಿನ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ ಪ್ರಶಸ್ತಿ ವಿತರಿಸಿದರು. ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜರ್ನಾರ್ದನ ಕಿಲೆಂಜೂರು ಅಧ್ಯಕ್ಷತೆ ವಹಿಸಿದ್ದರು. ಸಂದೀಪ್ ಶೆಟ್ಟಿ ಸಚ್ಚರಿಪೇಟೆ, ಜೊಸ್ಸಿ ಪಿಂಟೋ ಕಿನ್ನಿಗೋಳಿ, ರವೀಂದ್ರ ಶೆಟ್ಟಿ ಮೂರು ಕಾವೇರಿ, ಆದರ್ಶ ಶೆಟ್ಟಿ ಎಕ್ಕಾರು, ಲೋಕಯ್ಯ ಸಾಲ್ಯಾನ್ ಕೊಂಡೇಲ, ಹರಿಪ್ರಸಾದ್ ಬಾಳ, ಕುಶಲ ಪೂಜಾರಿ ತಾಳಿಪಾಡಿ, ಎಸ್. ಪ್ರಮೋದ ಭಂಡಾರಿ, ಯಜ್ಞಾತ ಆಚಾರ್ಯ, ಸಚಿನ್ ಶೆಟ್ಟಿ, ಪ್ರೇಮ್‌ರಾಜ್ ಶೆಟ್ಟಿ, ಶ್ರೀವೀರ ಮಾರುತಿ ವ್ಯಾಯಾಮ ಶಾಲೆ ಅಧ್ಯಕ್ಷ ಈಶ್ವರ್ ಕಟೀಲು, ಗೌರವಾಧ್ಯಕ್ಷ ಕೆ. ಭುವನಾಭಿರಾಮ ಉಡುಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement