ಕಿರುಕುಳ: ಇಬ್ಬರ ಸೆರೆ
ಮಂಗಳೂರು: ವೆಬ್ಸೈಟ್ ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಗರೋಡಿ ನಿವಾಸಿಗಳಾದ ಜಾಕ್ಸನ್ ಮತ್ತು ಡೆನ್ವರ್ ಬಂಧಿತರು. ಭಾನುವಾರ ರಾತ್ರಿ ಹಾಸ್ಟೆಲ್ಗೆ ತೆರಳುತ್ತಿರುವಾಗ ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಅಡ್ಡಗಟ್ಟಿ ಕಿರುಕುಳ ನೀಡಿದ್ದರು. ಪತ್ರಕರ್ತೆ ಬೊಬ್ಬೆ ಹೊಡೆದಾಗ ಪರಾರಿಯಾಗಿದ್ದರು.