ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನರಬಲಿ ಪ್ರಕರಣ: ಇಂದು ಶಾರಿಕಾ ಮರು ಮರಣೋತ್ತರ ಪರೀಕ್ಷೆ

Vishwanath S
Updated On : 3 Dec 2013, 11:24 am

ಸುಬ್ರಹ್ಮಣ್ಯ: ಚಾರ್ಮತದ ಹೆಣ್ಣು ಮಗು ಶಾರಿಕಾಳನ್ನು ನರಬಲಿ ನೀಡಲು ಬಳಕೆ ಮಾಡಲಾಗಿದೆ ಎಂಬ ವ್ಯಾಪಕ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಗುವಿನ ಮೃತದೇಹವನ್ನು ಡಿ.3ರಂದು ಹೂಳಿದ ಸ್ಥಳದಿಂದ ಮೇಲಕ್ಕೆತ್ತಿ ಮತ್ತೆ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
 ಕೋಡ್ತುಗುಳಿ ಮೋಹನ್‌ದಾಸ್- ಭವಾನಿ ದಂಪತಿ ಪುತ್ರಿ ಶಾರಿಕಾ ಕಳೆದ ಆ.11ರಂದು ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದಳು. 13 ದಿನಗಳ ಬಳಿಕ ಏನೆಕಲ್ಲು ಜೇನುಕೋಡಿ ಎಂಬಲ್ಲಿ ಹೊಳೆಯಲ್ಲಿ ರುಂಡ ಮತ್ತು ಬಲ ಕೈ ಇಲ್ಲದ ಸ್ಥಿತಿಯಲ್ಲಿ ಮಗುವಿನ ಮೃತದೇಹ ದೊರೆತಿತ್ತು.
 ನಾಪತ್ತೆಯಾಗಿ 13 ದಿನಗಳಾದರೂ ಮೃತದೇಹ ಹಸಿಯಾಗಿ ಕಂಡುಬಂದ ಹಿನ್ನೆಲೆ ಹಾಗೂ ತಲೆ ಮತ್ತು ಕೈ ಇಲ್ಲದ್ದರಿಂದ ಈ ಮಗುವನ್ನು ನಿಧಿಶೋಧಕ್ಕಾಗಿ ಬಲಿ ಕೊಡಲಾಗಿದೆ ಎಂಬ ಸಂಶಯ ಹುಟ್ಟಿಕೊಂಡಿತ್ತು. ಇದರ ಬೆನ್ನಲ್ಲೇ ಈ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕೆಂಬ ಒತ್ತಾಯ ಹೆತ್ತವರು ಮತ್ತು ಸಾರ್ವಜನಿಕರಿಂದ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಮರು ತನಿಖೆಗೆ ಆದೇಶಿಸಿತ್ತು. ಅದರಂತೆ ಮಂಗಳವಾರ ಮಗುವಿನ ಮೃತದೇಹ ಮೇಲಕ್ಕೆತ್ತುವ ಕಾರ್ಯ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement