12ರಂದು ಸಾಂಸ್ಕೃತಿಕ ಪ್ರತಿಭೆಗಳ ಸಮ್ಮಿಲನ
ಬಂಟ್ವಾಳ: ಆಲದಪದವು ಅಕ್ಷರ ಪ್ರತಿಷ್ಠಾನದ ದಶಮಾನೋತ್ಸವದ ಅಂಗವಾಗಿ ಡಿ.12ರಂದು ಬೆಳಗ್ಗೆ 9 ಗಂಟೆಗೆ ಬಿ.ಸಿ. ರೋಡ್‌ನ ಸ್ತ್ರೀಶಕ್ತಿ ಭವನದಲ್ಲಿ ಅಕ್ಷರ ಆಯನ ಸಾಂಸ್ಕೃತಿಕ ಪ್ರತಿಭೆಗಳ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನದ ನಿರ್ದೇಶಕರಾದ ರತ್ನದೇವ್ ಪುಂಜಾಲಕಟ್ಟೆ ಹಾಗೂ ದಿನೇಶ್ ಅಮೀನ್ ತಿಳಿಸಿದ್ದಾರೆ. ಶಿಕ್ಷಣ ಎಂಬ ಪರಿಕಲ್ಪನೆಯಡಿ ಬಂಟ್ವಾಳ ತಾಲೂಕಿನ ಪ್ರಾಥಮಿಕ, ಪ್ರೌಢ, ಪಪೂ, ಪದವಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಬಂಧ ಸ್ಪರ್ಧೆ ನಡೆಯಲಿದೆ. ಸ್ಪರ್ಧೆ ಆರಂಭಕ್ಕೆ ಒಂದು ಗಂಟೆ ಮೊದಲು ಪ್ರಬಂಧದ ವಿಷಯವನ್ನು ನೀಡಲಾಗುವುದು. ಅಲ್ಲದೆ ಮುಕ್ತ ವಿಭಾಗದಲ್ಲಿ ಅಕ್ಷರ ಮಾಲೆ-ರಾಷ್ಟ್ರಗೀತೆ ಬರೆಯುವುದು, ಸ್ನೇಹಿತರಿಗೊಂದು ಪತ್ರ, ಹೊಸ ಗಾದೆ ಕಟ್ಟುವುದು ಹಾಗೂ ಹೊಸ ಒಗಟು ರಚಿಸುವ ಸ್ಪರ್ಧೆ ನಡೆಯಲಿದೆ. ಇದು ನಾಲ್ಕೂ ಪ್ರತ್ಯೇಕ ಸ್ಪರ್ಧೆಗಳಾಗಿದ್ದು ಯಾರು ಯಾವ ಸ್ಪರ್ಧೆಯಲ್ಲಿ ಬೇಕಾದರೂ ಸ್ಪರ್ಧಿಸಬಹುದು. ವಯಸ್ಸು, ತರಗತಿಯ ಮಿತಿ ಇಲ್ಲ ಎಂದು ತಿಳಿಸಿದ್ದಾರೆ. ಪ್ರತಿ ಸ್ಪರ್ಧೆಗೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಮತ್ತು ಪ್ರಶಸ್ತಿ ಪತ್ರವಿದ್ದು, ಬಹುಮಾನಗಳನ್ನು 2014 ರ ಫೆ.7ರಂದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುವ ಅಕ್ಷರ ಪ್ರತಿಷ್ಠಾನದ ದಶಮಾನ ಸವಿ ಸಂಭ್ರಮ ಅಕ್ಷರೋತ್ಸವ ಸಮಾರಂಭದಲ್ಲಿ ವಿತರಿಸಲಾಗುವುದು. ಆಸಕ್ತರು ಡಿ.5ರೊಳಗೆ ಗೋಪಾಲ ಅಂಚನ್, (ಸಂಚಾಲಕರು, ಅಕ್ಷರ ಪ್ರತಿಷ್ಠಾನ ಆಲದಪದವು) ಯಕ್ಷಲೋಕ, ರಾಯಲ್ ಕಾಂಪ್ಲೆಕ್ಸ್, ಮುನ್ಸಿಪ್ ಕೋರ್ಟ್ ಎದುರು. ಬಿ. ಮೂಡ ಗ್ರಾಮ, ಜೋಡುಮಾರ್ಗ, ಬಿ.ಸಿ. ರೋಡ್, ಬಂಟ್ವಾಳ ತಾಲೂಕು, ದ.ಕ- 574219(ಮೊ. ಸಂಖ್ಯೆ- 9449104318) ಇಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.