ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಊಟ ಮಾಡದೆ ಮಡೆಸ್ನಾನ ನಿಷೇಧಿಸಲಿ

Vishwanath S
Updated On : 5 Dec 2013, 11:15 am

ಮಂಗಳೂರು: ಸಂಪ್ರದಾಯ ನಂಬಿಕೆ ಹೆಸರಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡೆಮಡಸ್ನಾನಕ್ಕೆ ಸ್ಥಳೀಯರೇ ಊಟ ಮಾಡಲು ನಿರಾಕರಿಸುವ ಮೂಲಕ ನಿಷೇಧ ಹೇರಬೇಕು ಎಂದು ರಾಜ್ಯ ಹಿಂದುಗಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಶಿವರಾಮು ಹೇಳಿದರು.
 ಎರಡು ವರ್ಷಗಳಿಂದ ತೀವ್ರ ಚರ್ಚೆ ನಡೆಯುತ್ತಿದ್ದರೂ ಮಡೆಮಡಸ್ನಾನ ರದ್ದಾಗದಿರುವುದು ದಿಗ್ಭ್ರಮೆ ಮೂಡಿಸಿದೆ. ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದರೂ ಅದು ಅದರ ಪಾಡಿಗೆ ಇರಲಿ. ವೇದ, ಉಪನಿಷತ್ ಕಲಿತ ಬ್ರಾಹ್ಮಣರೇ ಸ್ವಯಂ ಪ್ರೇರಣೆಯಿಂದ ಮೂಢನಂಬಿಕೆಗೆ ಅವಕಾಶ ನೀಡದೆ ಇರಲಿ ಎಂದರು.
 ಬಿಜೆಪಿ ಸರ್ಕಾರ ಅವಧಿಯಲ್ಲಿ ಈ ವಿಚಾರವನ್ನು ಕಾಂಗ್ರೆಸ್ ರಾಜಕೀಯ ದಾಳಿಗೆ ಬಳಸಿತ್ತು. ಇದರಲ್ಲಿ ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದರು, ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಈ ಬಾರಿ ರಾಜ್ಯ ಸರ್ಕಾರ ಮಧ್ಯೆಪ್ರವೇಶಿಸಿ ಸಂವಿಧಾನದ ಆಶಯಗಳನ್ನು ಕಾಪಾಡಬೇಕು. ಮಡೆಸ್ನಾನ ನಿಷೇಧಕ್ಕೆ ಆಗ್ರಹಿಸಿ ಡಿ.7ರಂದು ಹಿಂದುಳಿದ ವರ್ಗಗಗಳ ಜಾಗೃತ ವೇದಿಕೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಿದೆ.  ಮಡೆಸ್ನಾನವನ್ನು ಸ್ವಇಚ್ಛೆಯಿಂದಲೇ ಆಚರಿಸುತ್ತಾರೆ ಎಂದು ಪುರೋಹಿತಶಾಹಿಗಳು ವಾದ ಮಂಡಿಸುತ್ತಾರೆ. ಆದರೆ ಬೆತ್ತಲೆ ಸೇವೆಯನ್ನು ಜನ ಸ್ವ ಇಚ್ಛೆಯಿಂದಲೇ ಮಾಡುತ್ತಿದ್ದರು. ಆದರೆ ಅದನ್ನು ನಿಷೇಧಿಸಲಾಗಿದೆ ಎಂದರು.
ಕೋಡಿಮಠ ಶ್ರೀ ಬಂಧಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಅವಧಿ ಇನ್ನು ಕೇವಲ 10 ತಿಂಗಳು ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ.
 ಅವರನ್ನು ಕಂದಾಚರಣೆ ಕಾಯ್ದೆ ಬಂದ ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯವಿಶ್ವಕರ್ಮ ಮಹಾಮಂಡಲ ಮೈಸೂರು, ಜಿಲ್ಲಾಧ್ಯಕ್ಷ ಸಿ.ಟಿ.ಆಚಾರ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement