ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪರಿಸರ ಉಳಿಸಲು ಬಲಿಷ್ಠ ಹೋರಾಟಕ್ಕೆ ಅಣಿಯಾಗೋಣ: ಸುಬ್ರಹ್ಮಣ್ಯ ಶ್ರೀ

Vishwanath S
Updated On : 5 Dec 2013, 11:16 am

ಸುಬ್ರಹ್ಮಣ್ಯ: ಜಿಲ್ಲೆಯ ಪ್ರಕೃತಿ ದತ್ತವಾದ ಜೀವ ನಿಧಿಯನ್ನು ವಿಕೃತಿಗೊಳಿಸದೆ ಉಳಿಸುವ ಜವಾಬ್ದಾರಿ ನಮ್ಮದಾಗಿದೆ.ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂಬ ಘೋಷಣೆ ಈಗಾಗಲೇ ನಡೆದಿದೆ. ಒಬ್ಬರ ಬದುಕನ್ನು ಕಸಿದು ಬದುಕಬಾರದು. ಭವಿಷ್ಯತ್ವ ಹಾಗೂ ವರ್ತಮಾನದ ಚಿಂತನೆಯಲ್ಲಿ ನಮ್ಮ ಜವಬ್ದಾರಿ ಅರಿತು ಪರಿಸರ ಉಳಿಸಲು ಪ್ರಬಲ ಹೋರಾಟದ ದಿಕ್ಕು, ದೃಢ ಮತ್ತು ಬಲಿಷ್ಠವಾದ ಹೋರಾಟಕ್ಕೆ ಅಣಿಯಾಗೋಣ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕುಮಾರಧಾರಾ ಪರಿಸರ ಸಂರಕ್ಷಣಾ ಸಮಿತಿ ಕುಟ್ರುಪ್ಪಾಡಿ- ದೋಳ್ಪಾಡಿ ಇವರ ನೇತೃತ್ವದಲ್ಲಿ ಬುಧವಾರ ಸುಬ್ರಹ್ಮಣ್ಯದಲ್ಲಿ ನಡೆದ ಪರಿಸರ ಜಾಗೃತಿ ಜಾಥಾದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಪಶ್ಚಿಮಘಟ್ಟ ಉಳಿಸಲು ಅಂದೋಲನ: ಮನುಷ್ಯ ಬದುಕುಳಿಯಲು ನಿಸರ್ಗ ಬೇಕು. ಪಶ್ಚಿಮ ಘಟ್ಟದಲ್ಲಿನ ಹಸಿರು ನೆಲದಲ್ಲಿ ಜೈವಿಕ ಸಂಪತ್ತನ್ನು ಉಳಿಸುವ ಧ್ಯೇಯ ನಮ್ಮೆಲ್ಲರದ್ದು. ಈಗಾಗಲೇ ಗುಂಡ್ಯ, ಕುಮಾರಧಾರೆ ಇತ್ಯಾದಿ ನೇತ್ರಾವತಿಯ ಉಪನದಿಗಳ ಮೇಲೆ ವಿವಿಧ ಯೋಜನೆಗಳನ್ನು ಹೇರಿ ನಿಸರ್ಗವನ್ನು ಕೊಳ್ಳೆ ಹೊಡೆಯಲಾಗಿದೆ. ಸರ್ಕಾರದ ಕೆಟ್ಟ ನೀತಿಗೆ ಪಾಠ ಕಲಿಸಬೇಕು. ಅದಕ್ಕಾಗಿ ಮೈಮನಸ್ಸು ಗಟ್ಟಿ ಮಾಡಿ ಪಶ್ಚಿಮಘಟ್ಟ ಉಳಿಸಲು ತೀವ್ರವಾದ ಆಂದೋಲನ ಹಮ್ಮಿಕೊಂಡಿದ್ದೇವೆ ಎಂದು ಪಶ್ಚಿಮಘಟ್ಟ ಕಾರ್ಯಪಡೆಯ ಪೂರ್ವಾಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಪ್ರಸ್ತಾವಿತ ಅಣೆಕಟ್ಟು ಪ್ರದೇಶ ಉರುಂಬಿಯಿಂದ ಆರಂಭಗೊಂಡ ಪರಿಸರ ಜಾಗೃತಿ ಜಾಥಾ ಪದವು, ಕುಟ್ರುಪ್ಪಾಡಿ, ಕಡಬ, ಚಾರ್ವಾಕ, ಕಾಣಿಯೂರುಗಳಲ್ಲಿ ಸಂಚರಿಸಿತು. ಸಂಜೆ ಸುಬ್ರಹ್ಮಣ್ಯದ ರಥ ಬೀದಿಯಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಉರುಂಬಿ ಹೋರಾಟ ಸಮಿತಿಯ ಅಧ್ಯಕ್ಷ ಕರುಣಾಕರ ಗೋಗಟೆ ಸಭಾಧ್ಯಕ್ಷತೆ ವಹಿಸಿದ್ದರು.  ಪರಿಸರ ತಜ್ಞರಾದ ಡಾ. ಕುಮಾರಸ್ವಾಮಿ, ಡಾ.ಟಿ.ವಿ. ರಾಮಚಂದ್ರನ್, ಪರಿಸರ ತಜ್ಞೆ ಡಾ. ರಾಜೇಶ್ವರಿ, ವೆಲ್ಲಿ ಥಾಮಸ್ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಹೈಕೋರ್ಟ್ ವಕೀಲ ಶ್ರೀನಿವಾಸ್ ರಾವ್, ಮೋಹನ್ ನಂಬಿಯಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement