ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಸ್ ಕಮರಿಗೆ: 6 ಮಂದಿಗೆ ಗಾಯ

Lingaraj Badiger
Updated On : 6 Dec 2013, 12:47 pm

ಉಪ್ಪಿನಂಗಡಿ: ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ರಾಜಹಂಸ ಬಸ್ಸು ಇಲ್ಲಿಗೆ ಸಮೀಪದ ಲಾವತ್ತಡ್ಕ ಎಂಬಲ್ಲಿ ಹೆದ್ದಾರಿ ಬದಿಯ ಕಮರಿಗೆ ಬಿದ್ದು ಆರು ಮಂದಿ ಗಾಯಗೊಂಡ ಘಟನೆ ಗುರುವಾರ ನಸುಕಿನಲ್ಲಿ ಸಂಭವಿಸಿದೆ. ಬಸ್‌ನ ಟಾಯರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಚಾಲಕ ಶಿವಪ್ಪ, ಪ್ರಯಾಣಿಕರಾದ ಕಿಶೋರ್, ಶಿವಾನಂದ, ಪದ್ಮನಾಭ, ರವಿ, ಹನುಮಂತ, ಒಟ್ಟು ಆರು ಮಂದಿ ಗಾಯಗೊಂಡು ಪುತ್ತೂರಿನ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ಟ್ರಾಫಿಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
--
8ರಂದು ಬದನಡಿ ಷಷ್ಠಿ ಮಹೋತ್ಸವ
ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಇದೇ 8ರಂದು ವಾರ್ಷಿಕ ಷಷ್ಠಿ ಮಹೋತ್ಸವ ನಡೆಯಲಿದೆ. ಡಿ.7ರಂದು ಬೆಳಗ್ಗೆ ಇಲ್ಲಿನ ಶ್ರೀ ಬ್ರಹ್ಮಲಿಂಗೇಶ್ವರನಿಗೆ ಏಕದಶ ರುದ್ರಾಭಿಷೇಕ, ರಾತ್ರಿ ಭಜನೆ, ಪಂಚಮಿ ಉತ್ಸವ ಹಾಗೂ ಜಿಲ್ಲೆಯ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಿಂದ ಗಿರಿಜಾ ಕಲ್ಯಾಣ ಮತ್ತು ಷಣ್ಮುಖ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ. ಡಿ.8ರಂದು ಬೆಳಗ್ಗೆ ಪವಮಾನ ಅಭಿಷೇಕ, ಸಾಮೂಹಿಕ ಆಶ್ಲೇಷಾ ಬಲಿ, ಷಷ್‌ಠಿ ಮಹೋತ್ಸವ, ದೇವರ ಬಲಿ ಉತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ರಾತ್ರಿ ಕ್ಷೇತ್ರದ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
--
ಮಂಗಳೂರು-ಹೈದರಾಬಾದ್ ವೋಲ್ವೋ ಬಸ್ ಸಂಚಾರ ಶುರು
ಮಂಗಳೂರು: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಮಂಗಳೂರು-ಹೈದರಾಬಾದ್ ಮಧ್ಯೆ ಮಲ್ಟಿ ಆಕ್ಸಿಲ್ ವೋಲ್ವೋ ಸಾರಿಗೆ ಬುಧವಾರದಿಂದ ಪ್ರಾರಂಭವಾಗಿದೆ.
ಇದರೊಂದಿಗೆ ಹೆಚ್ಚುವರಿಯಾಗಿ ಮಂಗಳೂರು-ಹೈದರಾಬಾದ್ ವಯಾ ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲಾ, ಹುಬ್ಬಳ್ಳಿ, ರಾಯಚೂರು ಮಾರ್ಗದಲ್ಲಿ ವೋಲ್ವೋ(ಐರಾವತ)ಸಾರಿಗೆ ಕಾರ್ಯಾಚರಣೆಯಾಗುತ್ತಿದೆ. ಮಂಗಳೂರಿನಿಂದ ಸಂಜೆ 3ಕ್ಕೆ ಹೊರಟು 4ಕ್ಕೆ ಉಡುಪಿ, 5ಕ್ಕೆ ಕುಂದಾಪುರ, 6ಕ್ಕೆ ಭಟ್ಕಳ, ರಾತ್ರಿ 8.10ಕ್ಕೆ ಅಂಕೋಲಾ, 10.40 ಹುಬ್ಬಳ್ಳಿ, ಮರುದಿನ ಬೆಳಗ್ಗೆ 4.50ಕ್ಕೆ ರಾಯಚೂರು, 8.30ಕ್ಕೆ ಹೈದರಾಬಾದ್ ತಲುಪಲಿದೆ. ಹೈದರಾಬಾದ್‌ನಿಂದ ಸಂಜೆ 3ಕ್ಕೆ ಹೊರಟು ರಾತ್ರಿ 7.20 ರಾಯಚೂರು, ರಾತ್ರಿ 1.40 ಹುಬ್ಬಳ್ಳಿ, ಮರುದಿನ ಬೆಳಗ್ಗೆ 3.40 ಅಂಕೋಲಾ, 5.45 ಭಟ್ಕಳ, 6.40 ಕುಂದಾಪುರ, 7.30 ಉಡುಪಿ, 8.30 ಮಂಗಳೂರಿಗೆ ತಲುಪಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement