ಆನೆ ಹತ್ಯೆ: ಆರೋಪಿಗಳಿಬ್ಬರ ಬಂಧನ
ಗೋಣಿಕೊಪ್ಪಲು: ತಿತಿಮತಿ ಸಮೀಪ ಚೌಡಿಕಟ್ಟೆ ಅರಣ್ಯ ಮೂಲಕ ಕಾಡಾನೆಗಳು ನಿರಂತರ ಮರೂರು ಗ್ರಾಮದ ಕೃಷಿಕರ ತೋಟಕ್ಕೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡುತ್ತಿರುವುದೇ ಸುಮಾರು 65 ವರ್ಷ ಪ್ರಾಯದ ಗಂಡಾನೆಯನ್ನು ಹತ್ಯೆಗೈಯಲು ಪ್ರಮುಖ ಕಾರಣ ಎಂದು ಕೃತ್ಯದಲ್ಲಿ ಶಾಮೀಲಾದ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಉದ್ದೇಶಿತ ಘಟನೆಯು ಡಿ.3ರಂದು ಬೆಳಗಿನ ಜಾವ 5.30ರಿಂದ 6 ಗಂಟೆಯ ನಡುವೆ ನಡೆದಿದ್ದು, ಪ್ರಮುಖ ಆರೋಪಿ ವಿ. ಅರುಣ್ (36) ಎಂಬಾತ ಮರವೊಂದನ್ನೇರಿ ಕಾಫಿ ತೋಟದಲ್ಲಿ ನಿಂತಿದ್ದ ಆನೆಯ ಎಡಕಿವಿ ಮಧ್ಯ ಭಾಗಕ್ಕೆ ಗುಂಡು ಹೊಡೆದಿರುವುದಾಗಿ ಇತರೆ ಆರೋಪಿಗಳಾದ ತಿತಿಮತಿ ಮರೂರು ಗ್ರಾಮದ ಮಂಜು, ಫಿಗ್ಮಿ ಸಂಗ್ರಾಹಕ ಮಾದೇವ ತಿಳಿಸಿದ್ದಾರೆ.