575 ಮಂದಿ ಭಕ್ತರಿಂದ ಮಡೆಮಡಸ್ನಾನ
ಸುಬ್ರಹ್ಮಣ್ಯ: ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಜಾತ್ರೋತ್ಸವದ ಷಷ್ಠಿ ದಿನವಾದ ಭಾನುವಾರ ಸುಮಾರು 575 ರಷ್ಟು ಮಂದಿ ಭಕ್ತರು ಮಡೆಮಡಸ್ನಾನ ಸೇವೆ ಸಲ್ಲಿಸಿದರು. ಮಧ್ಯಾಹ್ನ ಮಹಾಪೂಜೆ ಬಳಿಕ ಹೋರಾಂಗಣದಲ್ಲಿ ಬ್ರಾಹ್ಮಣರು ಉಂಡ ಎಂಜಲೆಲೆ ಮೇಲೆ ದರ್ಪಣ ತೀರ್ಥದಲ್ಲಿ ಸ್ನಾನ ಮಾಡಿ ನಿಂತದ್ದ ಅಪಾರ ಸಂಖ್ಯೆಯ ಭಕ್ತರು ಮಡೆಮಡಸ್ನಾನ ಸೇವೆ ನಡೆಸಿದರು.
ಅನ್ನದಾನಕ್ಕೆ ಸರತಿ ಸಾಲು: ಭಾನುವಾರ ಬೆಳಗ್ಗೆ ನಡೆದ ಬ್ರಹ್ನರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ವಿವಿಧ ಕಡೆಗಳಿಂದ ಬಂದ ಭಕ್ತರು ಪಾಲ್ಗೊಂಡಿದ್ದರು. ನಂತರ ಮಧ್ಯಾಹ್ನ ನಡೆದ ಅನ್ನದಾನದಲ್ಲಿ ಗಣನೀಯ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಸರತಿ ಸಾಲಿನಲ್ಲಿ ನಿಂತು ಅನ್ನ ಪ್ರಸಾದ ಸೇವಿಸಿದರು.