ಅಪರಿಚಿತ ಶವ ಪಡೆಯಲು ವಿನಂತಿ
ಮಂಗಳೂರು: ವೆನ್ಲಾಕ್ ಆಸ್ಪತ್ರೆ ಶವಾಗಾರದಲ್ಲಿ ಇಬ್ಬರು ಅಪರಿಚಿತ ಮೃತ ರೋಗಿಗಳ ಶವ ಇರಿಸಲಾಗಿದ್ದು, ವಾರಸುದಾರರು ಮೂರು ದಿನದಲ್ಲಿ ಬಂದು ಶವವನ್ನು ಪಡೆದುಕೊಳ್ಳುವಂತೆ ಆಸ್ಪತ್ರೆ ವೈದ್ಯಾಧಿಕಾರಿಗಳು ಕೋರಿದ್ದಾರೆ. ಜೋಸೆಫ್(42) ಹಾಗೂಬ ಸುಂದರ(57) ಹೆಸರಿನ ವ್ಯಕ್ತಿಗಳ ಶವ ಇದಾಗಿದ್ದು, ಜೋಸೆಫ್ ಎಂಬಾತನ ವಿಳಾಸ ಬೋಂದೆಲ್ ಪದವಿನಂಗಡಿ ಎಂದು ನೀಡಲಾಗಿದೆ. ಸುಂದರ ಶಿವಮೊಗ್ಗ ನಿವಾಸಿ ಎಂದು ಹೇಳಲಾಗಿದೆ. ನ.29 ಮತ್ತು 30ರಿಂದು ಇವರಿಬ್ಬರು ಚಿಕಿತ್ಸೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಡಿ.2 ಮತ್ತು 6ರಂದು ಮೃತಪಟ್ಟಿದ್ದಾರೆ.
ರಾಷ್ಟ್ರಮಟ್ಟಕ್ಕೆ ಎಸ್‌ಡಿಎಂ ವಿದ್ಯಾರ್ಥಿಗಳು
ಬೆಳ್ತಂಗಡಿ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಅಮೆಚೂರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರೋಜಾ (ಹೆಪ್ಟತ್ಲಾನ್ ಚಿನ್ನ, 400 ಮೀ. ಹರ್ಡಲ್ಸ್ ಬೆಳ್ಳಿ), ಪ್ರಿಯಾ (ಉದ್ದ ಜಿಗಿತ ಮತ್ತು ತ್ರಿವಿಧ ಜಿಗಿತ- ಚಿನ್ನ), ರಾಣಿ ಕೆ.ಬಿ. (10 ಕಿ.ಮೀ. ನಡಿಗೆ- ಚಿನ್ನ), ನಿಶ್ಚಿತಾ (100ಮೀ.- ಚಿನ್ನ), ವಿಲ್ಮಾ ಡಿ' ಸೋಜ (5 ಕಿ.ಮೀ. ನಡಿಗೆ- ಚಿನ್ನ), ರಮ್ಯಾ (3000 ಮೀ.- ಚಿನ್ನ), ಪ್ರಿಯಾಂಕ (400 ಮೀ. ಹರ್ಡಲ್ಸ್ ಬೆಳ್ಳಿ), ಬಬಿತ (ತ್ರಿವಿಧ ಜಿಗಿತ- ಬೆಳ್ಳಿ), ಸಕ್ಕು ಬಾಯಿ (1500 ಮೀ.- ಬೆಳ್ಳಿ) ಮತ್ತು ಪುನೀತ್(ಒಕ್ಟೋತ್ಲಾನ್ ಬೆಳ್ಳಿ) ಪದಕ ಪಡೆಯುವುದರೊಂದಿಗೆ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಬಿ.ಟಿ. ಮಾನೆ ತರಬೇತಿ ನೀಡುತ್ತಿದ್ದಾರೆ.