ಇಂದಿನಿಂದ ಹಿಂದಿ ನಾಟಕ ಪ್ರದರ್ಶನ
ಮಂಗಳೂರು: ಶಿವದೇಶ ಸಂಚಾರ ತಂಡದ ವತಿಯಿಂದ ಡಿ. 9 ಮತ್ತು 10 ರಂದು ಸಂಜೆ 6.30ಕ್ಕೆ ಡಾನ್‌ಬಾಸ್ಕೊ ಸಭಾಂಗಣದಲ್ಲಿ ರಂಗಸಂಗಾತಿ ಅರ್ಪಿಸುವ 'ಮರಣ ಹಿ ಮಹಾನವಮ್' ಹಾಗೂ 'ಮೈನ್ ಬಾವರಿ ಚೆನ್ನಾಕಿ' 2 ಹಿಂದಿ ನಾಟಕ ಪ್ರದರ್ಶನ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 9480231299 ಸಂಪರ್ಕಿಸಬಹುದು.
ಇಂದು ಉದ್ಘಾಟನೆ
ಬೆಳ್ತಂಗಡಿ: ಮಧ್ಯಮ ಮತ್ತು ಕೆಳ ವರ್ಗದವರಿಗೆ ಮನೆಗಳನ್ನು ಮತ್ತು ಫ್ಲಾಟ್‌ಗಳನ್ನು ರಚಿಸಿ ಮಾರಲು ಗುರುವಾಯನಕೆರೆ ಸಸ್ಯೋದ್ಯಾನದ ಮಾಲೀಕ ಕೆ. ಸೋಮನಾಥ ನಾಯಕ್ ಇವರು ರಚಿಸಿರುವ ನೂತನ ಉದ್ಯಮ ಮೌರ್ಯ ಡೆವೆಲಪರ್ಸ್ ಉದ್ಘಾಟನಾ ಸಮಾರಂಭ ಸೋಮವಾರ ಬೆಳಗ್ಗೆ 10.15ಕ್ಕೆ ಸಸ್ಯೋದ್ಯಾನದ ಇಂಚರದಲ್ಲಿ ನಡೆಯಲಿದೆ. ವೇ.ಮೂ.ಜನಾರ್ದನ ವಾಸುದೇವ ಭಟ್ ಮೊಗರ್ನಾಡು ಉದ್ಘಾಟಿಸಲಿದ್ದು, ಶಾಸಕ ವಸಂತ ಬಂಗೇರ ಉಪಸ್ಥಿತರಿರುವರು.
ನಾಳೆ ಪಯ್ಯೊಟ್ಟು ಸದಾಶಿವ ಸಾಲ್ಯಾನ್‌ಗೆ ಪೌರ ಸನ್ಮಾನ
ಮೂಲ್ಕಿ: ಮೂಲ್ಕಿ ನಾಗರಿಕ ಸನ್ಮಾನ ಸಮಿತಿಯ ವತಿಯಿಂದ 10ರಂದು ಮಂಗಳವಾರ ಸಂಜೆ ಮೂಲ್ಕಿಯ ಬಪ್ಪನಾಡಿನ ಜ್ಞಾನ ಮಂದಿರದಲ್ಲಿ 2013ನೇ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಪಯ್ಯೊಟ್ಟು ಸದಾಶಿವ ಸಾಲ್ಯಾನ್‌ಗೆ ಪೌರ ಸನ್ಮಾನ ಕಾರ್ಯಕ್ರಮ ಜರಗಲಿದೆ. ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆಯವರು ಪಯ್ಯೊಟ್ಟು ಸದಾಶಿವ ಸಾಲ್ಯಾನ್‌ರನ್ನು ಸನ್ಮಾನಿಸಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಬಿ. ರಮಾನಾಥ ರೈ ವಹಿಸಲಿದ್ದಾರೆ. ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲು, ಭಾರತ್ ಬ್ಯಾಂಕ್ ಮುಂಬೈನ ಅದ್ಯಕ್ಷ ಜಯ ಸಿ. ಸುವರ್ಣ, ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ ಕೋಟ್ಯಾನ್ ಇರ್ವತ್ತೂರು, ಗೌರವಾಧ್ಯಕ್ಷ ಸದಾನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.