ಪುಂಡರೀಕಾಕ್ಷ ಉಪಾಧ್ಯಾಯಗೆ 'ಯಕ್ಷ ಸಿರಿ' ಪ್ರಶಸ್ತಿ ಪ್ರದಾನ
ಮಂಗಳೂರು: ರಾತ್ರಿಯನ್ನು ಹಗಲು ಮಾಡುವ ಯಕ್ಷಗಾನದಲ್ಲಿ ನವರಸಗಳಿದ್ದು, ಪ್ರೇಕ್ಷಕರನ್ನು ಬೆಳಗಿನವರೆಗೆ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದೆ ಎಂದು ಕಟೀಲು ಶ್ರೀದುರ್ಗಾಪರಮೇಶ್ವರಿ ಮಕ್ಕಳ ಮೇಳ ಅಧ್ಯಕ್ಷ ವೇ.ಮೂ.ಹರಿನಾರಾಯಣ ಆಸ್ರಣ್ಣ ಹೇಳಿದ್ದಾರೆ.
ಕಲ್ಕೂರ ಪ್ರತಿಷ್ಠಾನ ವತಿಯಿಂದ ಭಾನುವಾರ ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ಹಿರಿಯ ಯಕ್ಷಗಾನ ಸ್ತ್ರೀಪಾತ್ರಧಾರಿ ಪುಂಡರೀಕ ಉಪಾಧ್ಯಾಯರಿಗೆ 'ಯಕ್ಷ ಸಿರಿ' ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಶಾಲು, ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕವನ್ನು ನೀಡಲಾಯಿತು. ಪೇಜಾವರ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿ.ಕೆ.ಭಟ್ ಸೇರಾಜೆ ಅಭಿನಂದನಾ ಭಾಷಣ ಮಾಡಿದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು.
ಪಡುಬಿದ್ರಿ ನಾಗಬ್ರಹ್ಮ ಸನ್ನಿಧಿ ಮುಖ್ಯಸ್ಥ ಪಿ.ಜಿ.ನಾರಾಯಣ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಕಲಾ ಪೋಷಕರಾದ ಕೃಷ್ಣಮೂರ್ತಿ ರಾವ್, ಪೂರ್ಣಿಮಾ ರಾವ್, ಜಿ.ಆರ್.ರೈ, ಸಂಯೋಜಕ ಜನಾರ್ದನ ಹಂದೆ ಹಾಜರಿದ್ದರು. ಮಾಧುರಿ ಶ್ರೀರಾಮ್ ನಿರೂಪಿಸಿದರು.