ಬಿಜೆಪಿ ಸಂಭ್ರಮಾಚರಣೆ
ಉಪ್ಪಿನಂಗಡಿ: ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿ, ನೆಕ್ಕಿಲಾಡಿ, ಕಡಬಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಬೈಕ್ ರ್ಯಾಲಿ ನಡೆಸಿ ವಿಜಯೋತ್ಸವ ಆಚರಿಸಿದರು. ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿ ಬಿಜೆಪಿ ಮುಂದಾಳುಗಳಾದ ಕೇಶವ ಗೌಡ ಬಜತ್ತೂರು, ಉಮೇಶ್ ಶೆಣೈ, ಹರೀಶ್ ನಾಯಕ್, ಸುನಿಲ್ ಕುಮಾರ್ ದಡ್ಡು, ಸುರೇಶ್ ಅತ್ರಮಜಲು, ರಮೇಶ್ ಕಾಮತ್, ಮಂಜುನಾಥ ಶೆಣೈ, ರಾಜ್ಗೋಪಾಲ ಹೆಗ್ಡೆ, ಗಂಗಾಧರ ಟೈಲರ್, ರಾಮಚಂದ್ರ ಮಣಿಯಾಣಿ, ಯೋಗೀಶ್ ಶೆಣೈ, ಸತೀಶ್ ಕಾಮತ್, ಪ್ರಶಾಂತ್ ನೆಕ್ಕಿಲಾಡಿ ಇದ್ದರು.
ಪುತ್ತೂರಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಪುತ್ತೂರು: ದೆಹಲಿ, ಚತ್ತೀಸ್ಘಡ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದಕ್ಕೆ ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಪುತ್ತೂರಿನ ಬಿಜೆಪಿ ಕಚೇರಿ ಬಳಿ ಮತ್ತು ಬಸ್ಸು ನಿಲ್ದಾಣದ ಬಳಿಯಲ್ಲಿ ಪಟಾಕಿ ಸಿಡಿಸಿ ಘೋಷಣೆ ಕೂಗಿ ಸಂತಸ ಹಂಚಿಕೊಂಡರು. ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪಕ್ಷದ ಮುಖಂಡರಾದ ವಿಶ್ವೇಶ್ವರ ಭಟ್ ಬಂಗಾರಡ್ಕ, ಸಾಜ ರಾಧಾಕೃಷ್ಣ ಆಳ್ವ, ವಿಶ್ವನಾಥ ಗೌಡ, ಬಾಲಚಂದ್ರ, ವಿನಯ ಭಂಡಾರಿ, ಹರೀಶ್, ಶಿವರಂಜನ್, ಸಂತೋಷ್ ಬೋನಂತಾಯ, ಜಯಶಂಕರ ರೈ, ರಾಮದಾಸ್ ಹಾರಾಡಿ ಮತ್ತಿತರರು ಉಪಸ್ಥಿತರಿದ್ದರು.